ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ರೇಡಿಯೋ ಮಣಿಪಾಲ್ ಸಹ ಯೋಗದಲ್ಲಿ ನಡೆಯುತ್ತಿರುವ ಸರಣಿ ಕಾರ್ಯಕ್ರಮ 'ಕಥೆ ಕೇಳೋಣ'ದ ಭಾಗವಾಗಿ, ಕೇಳುಗರಿಗೆ ರೇಡಿಯೋ ಸೆಟ್ ಗಳನ್ನು ಉಚಿತವಾಗಿ ಹಸ್ತಾಂತರಿಸುವ ಅಭಿ ಯಾನ ಮ್ಯಾಕ್ಸ್ ಮೀಡಿಯಾ ಆವರಣ ದಲ್ಲಿ ನಡೆಯಿತು.
ಖ್ಯಾತ ಚಲನಚಿತ್ರ ನಟ ರಂಗ ನಿರ್ದೇಶಕ ಮಂಡ್ಯ ರಮೇಶ್ ಫಲಾನು ಭವಿಗಳಿಗೆ ರೇಡಿಯೋಗಳನ್ನು ವಿತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಮುಖ್ಯಸ್ಥರಾದ ಡಾ. ರಶ್ಮಿ ಅಮ್ಮೆಂಬಳ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾದ೯ನ್, ಗೌರವ ಕಾರ್ಯದರ್ಶಿ ಜನಾದ೯ನ್ ಕೊಡವೂರು, ಸಾಮಾಜಿಕ ಜಾಲತಾಣದ ಸಂಚಾಲಕ ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ, ರೇಡಿಯೊ ಮಣಿಪಾಲದ ಸ್ವಯಂ ಸೇವಕ ರಾದ ಸುನೀತಾ ಅಂಡಾರು ಮುಂತಾದವರು ಉಪಸ್ಥಿತರಿದ್ದರು.