ಉಡುಪಿ ಜಿಲ್ಲೆಯ, ಬ್ರಹ್ಮಾವರ ತಾಲ್ಲೂಕಿನ, ವಾರಂಬಳ್ಳಿ ಗ್ರಾಮದಲ್ಲಿ ಸುಮಾರು 5 ಎಕ್ರೆ ವಿಸ್ತೀರ್ಣದಲ್ಲಿ ಇ.ಎಸ್.ಐ ಆಸ್ಪತ್ರೆ ಪ್ರಾರಂಭಿಸುವ ಬಗ್ಗೆ 2022 ರಲ್ಲಿ ಕೇಂದ್ರ ಸರ್ಕಾರ 100ಬೆಡ್‌ಗಳುಳ್ಳ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಸುಮಾರು 150 ಕೋಟಿ ರೂ. ಕಾಯ್ದಿರಿಸಲಾಗಿತ್ತು.
ಅಲ್ಲದೇ, ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಈ ಹಿಂದಿನ ಗುತ್ತಿಗೆ ದಾರರು ಸಕಾಲದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳದ ಕಾರಣ ಈ ಹಿಂದೆ ಆದ ಟೆಂಡರ್ ಪ್ರಕ್ರಿಯೆ ಯನ್ನು ರದ್ದು ಪಡಿಸಲಾಗಿತ್ತು.
ಆಸ್ಪತ್ರೆ ಸಕಾಲದಲ್ಲಿ ನಿರ್ಮಾಣವಾಗಿಲ್ಲ ಎಂದು ಸಾರ್ವಜನಿಕರು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಈ ಬಗ್ಗೆ ಸಂಬ0ಧಪಟ್ಟ ಸಚಿವರಿಗೆ ಈಗಾಗಲೇ ಪತ್ರ ವ್ಯವಹಾರವನ್ನು ಮಾಡಿದ್ದು, ಇದಕ್ಕೆ ಸ್ಪಂದಿಸಿದ ಸಚಿವರು ಫೆಬ್ರವರಿ ತಿಂಗಳ ಅಂತ್ಯದಲ್ಲಿ ಪುನಃ ಟೆಂಡರ್ ಪ್ರಕ್ರಿಯೆಯನ್ನು ಕರೆದು ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸು ವುದಾಗಿ ಹೇಳಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.