ಕಳೆದ ಹದಿನೇಳು ವರ್ಷಗಳಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸಿ ಪ್ರದರ್ಶನ ವನ್ನು ವ್ಯವಸ್ಥೆಗೊಳಿಸುತ್ತಿರುವ ಯಕ್ಷಶಿಕ್ಷಣ ಟ್ರಸ್ಟಿಗೆ, ಕುಂದಾಪುರ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿಯವರ ಮನವಿಗೆ ಸ್ಪಂದಿಸಿ, ಐದು ಮೇಳಗಳನ್ನು ಹೊಂದಿದ ಮಂದಾರ್ತಿಯ ಶ್ರೀ ದುರ್ಗಾಪರ ಮೇಶ್ವರೀ ದೇವಸ್ಥಾನದ ವತಿಯಿಂದ ಪ್ರಸಾದ ರೂಪವಾಗಿ ರೂ. 2,50,000-00 ಚೆಕ್‌ನ್ನು 19.02.2025 ರಂದು ದೇವಳದ ಅಧ್ಯಕ್ಷರಾದ ಶ್ರೀ ಎಚ್. ಧನಂಜಯ ಶೆಟ್ಟಿಯವರು ಟ್ರಸ್ಟ್ಗೆ ನೀಡಿದರು.
ಈ ಸಂದರ್ಭದಲ್ಲಿ ದೇವಳದ ಲೆಕ್ಕಪತ್ರ ವಿಭಾಗದ ಅಧಿಕಾರಿಗಳಾದ ಶಂಭು ತಿಂಗಳಾಯ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಯಕ್ಷಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ಮುರಲಿ ಕಡೆಕಾರ್, ವಿಶ್ವಸ್ತರಾದ ನಾರಾಯಣ ಎಂ. ಹೆಗಡೆ, ಯು. ಎಸ್. ರಾಜಗೋಪಾಲ ಆಚಾರ್ಯ ಉಪಸ್ಥಿತರಿದ್ದರು.