Header Ads Widget

ಉಡುಪಿ ನೇತ್ರಜ್ಯೋತಿ ಕಾಲೇಜು : ಘಟಿಕೋತ್ಸವ ಹಾಗೂ ಹೊಸ ಪಿ ಜಿ ಸೆ೦ಟರ್ ಉದ್ಘಾಟನೆ.



ಉಡುಪಿ, ಫೆ. 11
: ನೇತ್ರ ಜ್ಯೋತಿ ಚಾರಿಟೆಬಲ್ ಟ್ರಸ್ಟ್ ಉಡುಪಿ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಸಹಸಂಸ್ಥೆ ನೇತ್ರಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ನೇತ್ರಜ್ಯೋತಿ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಘಟಿಕೋತ್ಸವ ಹಾಗೂ ನೂತನ ಸ್ನಾತಕೋತ್ತರ ಪದವಿ ಸೆಂಟರ್ ಉದ್ಘಾಟನೆ ಫೆ.13ರಂದು ಕಿನ್ನಿಮೂಲ್ಕಿ ವೇಗಾಸ್ ಟೌನ್'ಶಿಪ್'ನಲ್ಲಿರುವ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆ ಪ್ರವರ್ತಕರಾದ ಡಾ.ಕೂಡ್ಲು  ಕೃಷ್ಣಪ್ರಸಾದ್ ಮತ್ತು ರಶ್ಮಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.


ಅಂದು ಮಧ್ಯಾಹ್ನ 12 ಗಂಟೆಗೆ ನಡೆಯುವ ಘಟಿಕೋತ್ಸವದಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅತಿಥಿಯಾಗಿ ಆಗಮಿಸಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ, ಹೊಸ ಪಿ.ಜಿ ಸೆಂಟರ್ ಉದ್ಘಾಟಿಸುವರು.


ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಹಾಗೂ ಕರ್ನಾಟಕ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಚೇರ್ಮನ್ ಡಾ.ಯು.ಟಿ ಇಫ್ತಿಕರ್ ಅಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.



ವಿವಿಧ ಕೋರ್ಸ್‌ಗಳು: 2016ರಲ್ಲಿ ಆರಂಭಗೊಂಡ ನೇತ್ರಜ್ಯೋತಿ ಅರೆವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಬಿಎಸ್ಸಿ ಓಪ್ತಮೆಟ್ರಿ, ಬಿಎಸ್ಸಿ ಅನಸ್ತೇಶಿಯಾ ಮತ್ತು ಅಪರೇಷನ್ ಥಿಯೇಟರ್ ಟೆಕ್ನಾಲಜಿ, ಬಿಎಸ್ಸಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಬ್ಯಾಚಲರ್ ಇನ್ ಪಬ್ಲಿಕ್ ಹೆಲ್ತ್, ಬ್ಯಾಚಲರ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್, ಬ್ಯಾಚಲರ್ ಇನ್ ಫಿಸಿಯೋಥೆರಪಿ ಪದವಿ ಕೋರ್ಸ್ ಹಾಗೂ ಡಿಪ್ಲೊಮಾ ಕೋರ್ಸ್ ಗಳಾದ ಆಪ್ಥಾಲ್ಮಿಕ್ ಟೆಕ್ನಾಲಜಿ, ಅನಸ್ತೇಶಿಯಾ ಮತ್ತು ಅಪರೇಷನ್ ಥಿಯೇಟರ್ ಟೆಕ್ನಾಲಜಿ, ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ, ಮೆಡಿಕಲ್ ರೆಕಾರ್ಡ್ ಟೆಕ್ನಾಲಜಿ, ಹೆಲ್ತ್ ಇನ್ ಸ್ಪೆಕ್ಟರ್ ಟೆಕ್ನಾಲಜಿ ವಿಷಯಗಳಲ್ಲಿ ಡಿಪ್ಲೊಮಾ ಪದವಿ ಪಡೆಯಬಹುದು.


ಉತ್ತಮ ಫಲಿತಾಂಶ :ಕಳೆದ ಎಂಟು ವರ್ಷಗಳಿಂದ ಶೈಕ್ಷಣಿಕ ಫಲಿತಾಂಶಗಳಲ್ಲಿ ನಿರಂತರ ಅತ್ಯುತ್ತಮ ಫಲಿತಾಂಶ ಹೊಂದಿರುವ ಈ ಸಂಸ್ಥೆ, ರಾಜ್ಯದಲ್ಲಿಯೇ ಅತೀ ಹೆಚ್ಚಿನ ರ್ಯಾಂಕ್ ಪಡೆದಿರುವ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿದೆ. ಎಲ್ಲಾ ಪಿಜಿ ಕೋರ್ಸುಗಳು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಡಿ ಮಾನ್ಯತೆ ಪಡೆದಿವೆ