ರಾಷ್ಟ್ರೀಯ ವಿಚಾರಧಾರೆಗಳ ಪ್ರಖರ ಲೇಖಕ ಚಿಂತಕ ಡಾ ವಿಕ್ರಮ್ ಸಂಪತ್ ಅವರ ಮಾತುಗಳ ನ್ನಾಲಿಸಲೂ ಬಂದಿದೆ ಒಂದು ಸದವಕಾಶ ..!!!
ಉಡುಪಿಯ ಸಮಸ್ತ ರಾಷ್ಟ್ರಪ್ರೇಮಿ ಬಂಧುಗಳೇ... ದೇಶದ ಅದ್ಭುತ ಪುರಾತತ್ತ್ವ ಶಾಸ್ತ್ರಜ್ಞ , ಅಯೋಧ್ಯೆ ವಾರಣಾಸಿಯಂಥಹ ದೇಶದ ಪುಣ್ಯನೆಲೆಗಳ ಮೇಲೆ ನಡೆದಿರುವ ಮತಾಂಧ ಶಕ್ತಿಗಳ ಧಾಳಿ ಅನಾಚಾರ ಗಳ ಬಗ್ಗೆ ದುರ್ಬೀನು ಹಿಡಿದು ಸಂಶೋಧನೆ ನಡೆಸಿ , ನ್ಯಾಯಾಲಯದಲ್ಲೂ ಸನಾತನಿ ಗಳಿಗೆ ಅಮೋಘ ವಿಜಯ ದೊರೆಯುವಲ್ಲಿ ಪ್ರಮುಖ ಸಾಕ್ಷ್ಯ ನುಡಿದು ಜಗತ್ತನ್ನೇ ಬೆರಗಾಗಿಸಿದ ಪದ್ಮಶ್ರೀ ಪುರಸ್ಕೃತ ಪುರಾತ ತ್ತವ ಶಾಸ್ತ್ರಜ್ಞ ಡಾ ಕೆ ಕೆ ಮೊಹಮ್ಮದ್ ರು ಮತ್ತೊಮ್ಮೆ ಉಡುಪಿಗೆ ಬರ್ತಾ ಇದ್ದಾರೆ.
ಜೊತೆಗೆ... ರಾಷ್ಟ್ರೀಯ ವಿಚಾರಗಳ ಪ್ರಖರ ಚಿಂತಕ ,ಇತಿಹಾಸಕಾರ , ವಾಗ್ಮಿ , waiting for Shiva ಎನ್ನುವ ಕೃತಿಯ ಮೂಲಕ ವಾರಣಾಸಿಯ ಬಗ್ಗೆ ಕೋಟ್ಯಂತರ ಜನ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಯುವ ಲೇಖಕ ಡಾ ವಿಕ್ರಮ್ ಸಂಪತ್ ಅವರೂ ಉಡುಪಿಯತ್ತ ಹೊರಟಿ ದ್ದಾರೆ... ಬರುವ ಫೆಬ್ರವರಿ 27/ರಂದು ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ ಉಡುಪಿ ಅಜ್ಜರಕಾಡಿನ ಪುರ ಭವನದಲ್ಲಿ ಈ ಈರ್ವರ ಉಪನ್ಯಾಸ ಕೇಳುವ ಸದವಕಾಶ ಒದಗಿದೆ .
ಉಡುಪಿ ಕಂಡ ಶ್ರೇಷ್ಠ ಇತಿಹಾಸ ಸಂಶೋಧಕ , ಸಮಸ್ತ ಆಸ್ತಿಕ ಸಮಾಜ ನೂರು ಕಾಲ ಸ್ಮರಿಸಲೇ ಬೇಕಾದ ಕೀರ್ತಿಪುರುಷ ಡಾ ಪಾದೂರು ಗುರುರಾಜ ಭಟ್ಟರ ಜನ್ಮ ಶತಾಬ್ದಿ ಅವಸರದಲ್ಲಿ ಅವರ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಈ ಈರ್ವರೂ ಮಹನೀಯರು ಬರುತ್ತಿದ್ದಾರೆ..ಜೊತೆಗೆ ಮತ್ತೋರ್ವ ಇತಿಹಾಸಜ್ಞ ಸುರೇಂದ್ರನಾಥ್ ಬೊಪ್ಪರಾಜು ಅವರೂ ಇರುತ್ತಾರೆ.
ಅನೇಕ ಗಣ್ಯರಿಗೆ ಸಂಮಾನವೂ ಇದೆ. ಉಡುಪಿಯ ಸಮಸ್ತ ದೇಶ - ಧರ್ಮಪ್ರೇಮಿಗಳು ಇತಿಹಾಸಾ ಸಕ್ತರು ಅವತ್ತಿನ ದಿನವನ್ನು ಇವತ್ತೇ ತಮ್ಮ ಕಾರ್ಯಸೂಚಿಯಲ್ಲಿ ಗೊತ್ತುಮಾಡಿ ಕೊಳ್ಳಿ...ದಯವಿಟ್ಟು ಬನ್ನಿ..ಎರಡು ಅಮೂಲ್ಯ ಉಪನ್ಯಾಸ ಕೇಳಲು ನಮ್ಮ ಜೊತೆಯಾಗಿ..ಹೊಸ ತಲೆಮಾರಿನ ಯುವಕ ಯುವತಿಯರೂ ಬನ್ನಿ ....ದೇಶದ ಇತಿಹಾಸದ ಬಗ್ಗೆ ಮತ್ತಷ್ಟು ತಿಳಿದು ದೇಶಪ್ರೀತಿ ಹೆಚ್ಚಿಸಿಕೊಳ್ಳಿ... ಎಂದು ಡಾ ಪಾದೂರು ಗುರುರಾಜ ಭಟ್ಟ ಪ್ರತಿಷ್ಠಾನ ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿ : ವಾಸುದೇವ ಭಟ್ ಪೆರಂಪಳ್ಳಿ