ಪೂರ್ಣಪ್ರಜ್ಞ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ”ದತ್ತುಗ್ರಾಮ ಅಲೆವೂರಿನಲ್ಲಿ" 2024-25ರ ವಾರ್ಷಿಕ ಶಿಬಿರನ್ನು ದಿನಾಂಕ :-07-02-2025 ರಿಂದ 13-02-2025ರ ವರೆಗೆ ಅಲೆವೂರಿನ ಸುಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದೆ. ಶಿಬಿರದ ಉದ್ಘಾಟನೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಡಾ.ರಮೇಶ್. ಟಿ.ಎಸ್ ಅವರು ಅಧ್ಯಕ್ಷತೆಯನ್ನು ವಹಿಸಿ ಉಧ್ಘಾಟನೆ ಮಾಡಿದರು. ಶಿಬಿರದ ಮುಖ್ಯ ಅಥಿತಿಗಳಾಗಿ ಪಿಪಿಸಿಯ ಆಡಳಿತಾಧಿಕಾರಿ ಪುಂಡರೀಕಾಕ್ಷ ಕೊಡಂಚ ಅವರು ಆಗಮಿಸಿದ್ದರು. ಗೌರವ ಉಪಸ್ಥಿತರಾಗಿ ಶ್ರೀಮತಿ ವಾರಿಜ ಶೆಟ್ಟಿ, ಶೆಶಿಪ್ರಭ ಶೆಟ್ಟಿ, ಐಕ್ಯೂಎಸಿ ಸಂಯೋಜಕರಾದ ಡಾ.ವಿನಯ ಕುಮಾರ್, ಸುಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಪುಷ್ಪಲತಾ ಬಿ.ಎಸ್. ರಾಷ್ಟೀಯ ಸೇವಾ ಯೋಜನಾಧಿಕಾರಿಗಳಾದ ಡಾ.ನಾಗರಾಜ.ಜಿ.ಪಿ, ಶ್ರೀಮತಿ ಸುಪರ್ಣ , ಸಹ ಯೋಜನಾಧಿಕಾರಿಗಳಾದ ಶ್ರೀಮತಿ ಸ್ವಾತಿ ಪಿ.ಕೆ, ಮಹೇಶ್ ಶೆಟ್ಟಿ , ಎನ್.ಎಸ್.ಎಸ್ ತಂಡದ ನಾಯಕರು, ಶಿರಾರ್ಥಿಗಳು, ಸುಬೋಧಿನೀ ಶಾಲೆಯ ಶಿಕ್ಷಕವರ್ಗ ,ಮಕ್ಕಳು ಹಾಜರಿದ್ದರು.