Header Ads Widget

ಫೆಬ್ರವರಿ 15 ರಿಂದ 17 ಉಡುಪಿಯಲ್ಲಿ ಮುರಾರಿ - ಕೆದ್ಲಾಯ ರಂಗೋತ್ಸವ

                                                               

ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು (ರಿ.) ಉಡುಪಿ ಆಶ್ರಯದಲ್ಲಿ ಡಾ. ನಿ. ಮುರಾರಿ ಬಲ್ಲಾಳ್ಲ್ ಮತ್ತು ಪ್ರೊ. ಕೆ.ಎಸ್. ಕೆದ್ಲಾಯ ನೆನಪಿನ ಮುರಾರಿ - ಕೆದ್ಲಾಯ ರಂಗೋತ್ಸವ ಫೆಬ್ರವರಿ 15, 16 ,17 , 2025 ಪ್ರತಿದಿನ ಸಂಜೆ ಗಂಟೆ 6:30ಕ್ಕೆ ಉಡುಪಿ ಎಂ. ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿರು ವುದು .


 ತಾ. 15 . 02 . 2025 ಶನಿವಾರ ಸಂಜೆ ಗಂಟೆ 5.45 ಕ್ಕೆ ಈ ರಂಗೋತ್ಸವನ್ನು ಮಂಗಳೂರಿನ  ಖ್ಯಾತ ಸಾಮಾಜಿಕ ಕಾರ್ಯಕರ್ತ ಶ್ರೀ ಮುನೀರ್ ಕಾಟಿಪಳ್ಳ ಅವರು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ಉಡುಪಿ ಎಂ.ಜಿ.ಎಂ. ಕಾಲೇಜು ಪ್ರಾಂಶುಪಾಲರಾದ  ಪ್ರೊ. ಲಕ್ಷ್ಮೀ ನಾರಾಯಣ ಕಾರಂತ  ಅವರು ಭಾಗವಹಿಸಲಿದ್ದಾರೆ.  


ನಂತರ ಸಂಕಲ್ಪ - ಮೈಸೂರು ತಂಡದಿಂದ ಜತೆಗಿರುವನು ಚಂದಿರ'  ( ರಚನೆ:  ಜಯಂತ್ ಕಾಯ್ಕಿಣಿ ,ನಿರ್ದೇಶನ : ಹುಲುಗಪ್ಪ ಕಟ್ಟಿಮನಿ) . ತಾ. 16. 02 .2025 ,ಭಾನುವಾರ ಜಂಗಮ ಕಲೆಕ್ಟಿವ್ - ಬೆಂಗಳೂರು ತಂಡದಿಂದ ಬಾಬ್ ಮಾರ್ಲಿ ಫ್ರಮ್ ಕೋಡಿ ಹಳ್ಳಿ (ಡ್ರಮಟರ್ಗ್  : ವಿ ಎಲ್ ನರಸಿಂಹ ಮೂರ್ತಿ, ನಿರ್ದೇಶನ ಕೆ .ಪಿ ಲಕ್ಷ್ಮಣ್) 


ತಾ. 17 .02. 2025 ಸೋಮವಾರ  ಮಂದಾರ (ರಿ) -ಬೈಕಾಡಿ ತಂಡದಿಂದ  ಬೆತ್ತಲಾಟ'  ( ಮೂಲ:  ದಾರಿಯೋ ಫೋ, ಅನುವಾದ:  ಪ್ರಕಾಶ್ ಗರುಡ ನಿರ್ದೇಶನ: ರೋಹಿತ್ ಎಸ್. ಬೈಕಾಡಿ )  ನಾಟಕಗಳು ಪ್ರದರ್ಶನಗೊಳ್ಳಲಿವೆ.