ಗೆಳೆಯರ ಬಳಗ ರಿ. ಕ್ರೀಡಾ ಸಂಘ, ಕಳ್ತೂರು ಸಂತೆಕಟ್ಟೆ ಇದರ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿನಾಂಕ:01-02-2025 ರಂದು ಗೆಳಯರ ಬಳಗ (ರಿ) ಕ್ರೀಡಾ ಸಂಘದ ಅಧ್ಯಕ್ಷರಾದ ಚಂದ್ರ ಕಳ್ತೂರು ಇವರ ಅಧ್ಯಕ್ಷತೆಯಲ್ಲಿ ಕಳ್ತೂರು ಬುಕ್ಕಿಗುಡ್ಡೆ ಕೊರಗರ ಹಾಡಿಯಲ್ಲಿ ನಡೆಸಲಾಯಿತು.ಈ ಕಾರ್ಯಕ್ರಮದ ನಿರೂಪಣೆಯನ್ನು ಸುರೇಂದ್ರ ಕಳ್ತೂರು ಹಾಗೂ ವಿಮಲ ಕಳ್ತೂರು, ಪ್ರಾರ್ಥನೆಯನ್ನು ಸುಪ್ರೀತಾ ಮತ್ತು ತಂಡ,ಸ್ವಾಗತವನ್ನು ರಂಜಿತ್ ಕಳ್ತೂರು, ಪ್ರಾಸ್ತಾವಿಕ ಭಾಷಣವನ್ನು ಸುಚಿತ್ರಾ ಕಳ್ತೂರು, ಬಹುಮಾನದ ಪಟ್ಟಿಯನ್ನು ಸುಪ್ರೀತಾ ಹಾಗೂ ಸುಚಿತ್ರಾ ಕಳ್ತೂರು, ಸನ್ಮಾನಿತರ ಅಭಿನಂದನಾ ಪತ್ರವನ್ನು ರಂಜಿತಾ ಕಳ್ತೂರು, ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಸುನಂದಾ ಕಳ್ತೂರು ಮತ್ತು ಧನ್ಯವಾದವನ್ನು ಗೆಳಯರ ಬಳಗ (ರಿ) ಕ್ರೀಡಾ ಸಂಘ ಇದರ ಕಾರ್ಯದರ್ಶಿಯಾಗಿರುವ ಸುರೇಶ್ ಕಳ್ತೂರು ಇವರು ನೆರವೇರಿಸಿದರು.