Header Ads Widget

​ಸ್ಕೌಟ್ಸ್ ಗೈಡ್, ಕಬ್​ ​ಬುಲ್ ಬುಲ್ ಬೇಸಿಗೆ ಶಿಬಿರ

 

ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ, ಕೆಮ್ಮಣ್ಣು


20204 25 ನೇ ಶೈಕ್ಷಣಿಕ ವರ್ಷದ ಸ್ಕೌಟ್ಸ್  ಗೈಡ್,  ಕಬ್​ ಬುಲ್ ಬುಲ್ ಬೇಸಿಗೆ ಶಿಬಿರವನ್ನು ದಿನಾಂಕ 25/2/25 ರಂದು ಜಾರ್ಜ್ ಮತ್ತು ಡೋರಾ ಅಂದ್ರಾದೆ ಇವರ ತೋಟದಲ್ಲಿ ಕೈಗೊಳ್ಳಲಾಯಿತು. 


ಡೋರಾ ಅಂದ್ರಾದೆ ಇವರ  ಪುತ್ರಿ ಮತ್ತು ಮಿಲಾಗ್ರಿಸ  ಕಾಲೇಜ್ ಗೈಡ್ಸ್ ಹಾಗೂ NCC ಹಳೆ ವಿದ್ಯಾರ್ಥಿನಿ ಯಾದ ಜೋವಿಟ ಅಂದ್ರಾದೆ  ಇವರು ತಮ್ಮ ಅನುಭವವನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವುದಲ್ಲದೆ ಕೆಲವು ಸಲಹೆಗಳನ್ನು ನೀಡಿದರು.


ಸ್ಕೌಟ್ಸ್ ಗೈಡ್ಸ್ ಕಬ್ ಬುಲ್ ಬುಲ್ ವಿದ್ಯಾರ್ಥಿಗಳು ಬೆಂಕಿ ಇಲ್ಲದ ಅಡುಗೆ ,​ ಮಾಸ್ಕ್ ತಯಾರಿಕೆ, ವಿವಿಧ ಆಟಗಳ ಮೂಲಕ ಬೇಸಿಗೆ ಶಿಬಿರವನ್ನು ಬಹಳ ಸಂತೋಷವಾಗಿ ಆಚರಿಸಿದರು.


 ಈ ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಗೈಡ್ಸ್ ನ ಕ್ಯಾಪ್ಟನ್ ಅಶ್ವಿನಿ ಇವರ ನೇತೃತ್ವದಲ್ಲಿ ಹಾಗೂ ಟೀಚರ್ ಅನ್ನಿ ಮತ್ತು ಲೊವಿನಾ ಇವರ ಸಹಯೋಗದೊಂದಿಗೆ ಬೇಸಿಗೆ ಶಿಬಿರವನ್ನು ಕೈಗೊಂಡರು.