Header Ads Widget

ಚಾಲಕ ಜೀವದ ಮಾಲಿಕ ~ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ

ಅಜಾಗರುಕತೆಯ ವಾಹನ ಚಾಲನ

ಆಹ್ವಾನಿಸುವುದು ಅನಿರೀಕ್ಷಿತ ಮರಣ
ಚಾಲಕನಿವನು ನಮ್ಮ ಜೀವದ ಮಾಲಿಕ
ಇದನ್ನರಿಯಬೇಕು ಪ್ರತಿಯೊಬ್ಬ ಚಾಲಕ

ವರ್ಷಕ್ಕೊಂದು ದೂರದ ಪಯಣ
ಕುಟುಂಬದಲ್ಲಿರಲಿ ಖುಷಿಯ ತೋರಣ
ಕ್ಷೇಮವಾಗಿ ಮತ್ತೆ ಹಿಂತಿರುಗೋಣ
ನಿಮ್ಮಿಂದಾಗದಿರಲಿ ಅಪಘಾತದ ಮರಣ

ಚಾಲಕನ ನಂಬಿ ವಾಹನದಲ್ಲಿ ಕುಳಿತರು
ಪ್ರಯಾಣಿಕರ ಪಾಲಿಗೆ ಅವನೇ ದೇವರು
ದಿನೇ ದಿನೇ ಹೆಚ್ಚಾಗುತ್ತಿವೆ ವಾಹನಗಳು
ಜೀವ ನುಂಗುತ್ತಿವೆ ಮರಣ ಗುಂಡಿಗಳು

ಕಂಡ ಕನಸುಗಳ ನನಸಾಗಿಸೋಣ
ಜಾಗ್ರತೆಯಿಂದ ವಾಹನ ಚಲಿಸೋಣ
ಸಂಚಾರಿ ನಿಯಮ ಪಾಲಿಸೋಣ
ನಮ್ಮಿಂದಾಗುವ ಅಪಘಾತ ತಪ್ಪಿಸೋಣ.


ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ 🖊️
ಸಾಮಾಜಿಕ ಜಾಲತಾಣ ಸಂಚಾಲಕರು
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲ್ಲೂಕು ಘಟಕ.