Header Ads Widget

ರಾಯಪ್ಪನ ಮಠದಲ್ಲಿಯ ಕೆರೆಕಟ್ಟೆ ಶೇಷಾಬನದ ಪುನರ್ ಪ್ರತಿಷ್ಠೆ

ಕುಂದಾಪುರದ ವಡೆರಹೋಬಳಿ, ರಾಯಪ್ಪನ ಮಠದಲ್ಲಿಯ ಕೆರೆಕಟ್ಟೆ ಶೇಷಾಬನದ ಪುನರ್ ಪ್ರತಿಷ್ಠೆ, ಅಶ್ವಥ ಉಪನಯನ, ಮದುವೆ, ಯಕ್ಷಿ ಸಾನಿದ್ಯ ಪ್ರತಿಷ್ಠಾಪನೆ ಮೊದಲಾದ ಧಾರ್ಮಿಕ ಕಾರ್ಯಕ್ರಮ ಗಳು ಬಹಳ ವಿಜೃಂಭಣೆಯಿಂದ ನೆರವೇರಿತು.


ಇದರಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮತ್ತು ಪುರೋಹಿತರಾದ ಶ್ರೀ ಪ್ರಸಾದ ಐತಾಳ್, ಉಪಾಧ್ಯಕ್ಷ ರಾದ  ಅಮೃತ ಹೊಳ್ಳ, ನಾಗಪ್ಪ ಪೂಜಾರಿ, ಬಾಬು ಮೆಂಡನ್, ವಿ ಪ್ರಭಾಕರ್, ಕಾರ್ಯದರ್ಶಿ ನಾಗ ರಾಜ ರಾಯಪ್ಪನ ಮಠ, ಕೋಶಾಧಿಕಾರಿ ರಾಜೇಶ್ ರಾವ್, ಬನದ ಜಾಗದ ಮೂಲ ಯಜಮಾನರಾದ ಪಿ ಎಸ್ ರಾವ್ ಮನೆಯವರು , ಕುಟುಂಬದ ಹಿರಿಯರಾದ ಪ್ರಕಾಶ ಹೊಳ್ಳ, ವೆಂಕಟೇಶ ಹೊಳ್ಳ,,ಶೇಷಪ್ಪ ಹೊಳ್ಳ, ನಾಗರಾಜ ಅನಂತ ಹೊಳ್ಳ, ಬಾಬುರಾಯ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಕೆರೆಕಟ್ಟೆ ನಾಗರಾಜ ಹೊಳ್ಳರು ಈ ಎಲ್ಲಾ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಈ ಶಿಲಾಮಯ ಬನ ಕಾರ್ಕಳದ ಖ್ಯಾತ ಶಿಲ್ಪಿ ಗೋಪಾಲರಿಂದ ಕಟ್ಟಲ್ಪಟ್ಟಿದೆ. ಈ ಧಾರ್ಮಿಕ ಕಾರ್ಯ ಕ್ರಮದ ಎಲ್ಲಾ ಪೂಜೆಯ ಕರ್ಮಾoಗ ಕರ್ಥ ರಾಗಿ ಕಾಳಿಂಗ ಹೊಳ್ಳರು ನಡೆಸಿ ಕೊಟ್ಟರು. ಅಶ್ವಥ ಉಪ ನಯನ, ಮದುವೆ ಕಾರ್ಯಕ್ರಮ ವನ್ನು ಶ್ರೀಮತಿ ಮತ್ತು ಶ್ರೀ ಪಿ ಚಿದಾನಂದ ರಾವ್ ಮತ್ತು ಶ್ರೀಮತಿ ಮತ್ತು ಶ್ರೀ ಶ್ರೀಕಾಂತ ಹೊಳ್ಳರು ಕೂಡಿ ನಡೆಸಿಕೊಟ್ಟರು. 



ಈ ಎಲ್ಲಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ಈ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಎರಡು ದಿನದ ಅನ್ನ ಪ್ರಸಾದ ಸೇವೆಯನ್ನು ದಿ. ರಾಮಕೃಷ್ಣ ಹೊಳ್ಳರ ಸ್ಮಾರಣಾರ್ಥ ಅವರ ಮಕ್ಕಳಾದ ಸುರೇಶ ಹೊಳ್ಳ ಮತ್ತು ಮಹೇಶ ಹೊಳ್ಳರು ವಹಿಸಿದ್ದರು . 


ಈ ಎರಡು ದಿನವೂ ಸ್ಥಳೀಯ ಯುವಕ ಯುವತಿಯರು ಸ್ವಯಂ ಸೇವಕರಾಗಿ ಸೇವೆ ಗೈದರು. ಮಹಿಳೆ ಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದು ಹಲವಾರು ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯರಾದ ಶ್ರೀಕಾಂತ ಹೊಳ್ಳರು ಶಿಲಾಮಯ ನಾಗಬನದ ನಿರ್ಮಾಣ  ಮತ್ತು ಧಾರ್ಮಿಕ ಕಾರ್ಯ ಕ್ರಮದ ಪೂರ್ವ ತಯಾರಿಯಲ್ಲಿ ಕಾಲ ಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಕಾರ್ಯಕ್ರಮ ಯಶಸ್ವಿ ಗೊಳ್ಳುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕೊನೆಯಲ್ಲಿ ಅನ್ನ ಪ್ರಸಾದ ಮುಗಿದ ತಕ್ಷಣ ಪ್ರತ್ಯಕ್ಷ ಜೀವಂತ ನಾಗ ಭಕ್ತರಿಗೆ ದರ್ಶನ ನೀಡಿದ್ದು ಬಹಳ ವಿಶೇಷವಾಗಿತ್ತು.