Header Ads Widget

ಬೆಳ್ಳಳೆ ಶ್ರೀ ಬೊಬ್ಬರ್ಯ ಕ್ಷೇತ್ರ ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ: ಚಪ್ಪರ ಮುಹೂರ್ತ

 

ತೆಂಕನಿಡಿಯೂರು ಬೆಳ್ಳಳೆ ಶ್ರೀ ಬೊಬ್ಬರ್ಯ ಕ್ಷೇತ್ರದ ನವೀಕೃತ ದೈವಾಲಯ ಸಮರ್ಪಣೆ, ಬ್ರಹ್ಮ ಕುಂಭಾಭಿಷೇಕ, ಕಾಲಾವಧಿ ನೇಮ ಮೊದಲಾದ ಕಾರ್ಯಕ್ರಮಗಳು 3ರಿಂದ 6ರವರೆಗೆ ನಡೆಯಲಿದ್ದು ಅವರ ಪೂರ್ವಬಾವಿಯಾಗಿ ಚಪ್ಪರ ಮುಹೂರ್ತ ಕಾರ್ಯಕ್ರಮವು ರವಿವಾರ ನಡೆಯಿತು.



ವೇ।ಮೂ।ಪುತ್ತೂರು ಶ್ರೀನಿವಾಸತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದು ಬಳಿಕ ಚಪ್ಪರ ಮುಹೂರ್ತವನ್ನು ನಡೆಸಿದರು. ಕ್ಷೇತ್ರದ ಮೊತ್ತೇಸರ ಐತು ಎಂ. ಶೆಟ್ಟಿ ಜೀರ್ಣೋದ್ದಾರ ಸಮಿ ತಿಯ ಅಧ್ಯಕ್ಷ ಪ್ರಭಾಕರ ಕೆ. ಶೆಟ್ಟಿ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.