ಶ್ರೀ ನೆಲ್ಲಿದಡಿ ಗುತ್ತು ಕಾಂತೇರಿ ಜುಮಾದಿ ದೈವಸ್ಥಾನದ ಅಸ್ತಿತ್ವಕ್ಕೆ ದಕ್ಕೆ ತಂದಿರುವ ಎಂ ಎಸ್ ಇ ಝೆಡ್ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಯ ವಿರುದ್ಧ ತುಳುನಾಡಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಆದರೆ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಇನ್ನೂ ಎಚ್ಚೆತ್ತು ಕೊಂಡಂತೆ ಕಾಣುತ್ತಿಲ್ಲ. ದಿನಾಂಕ 3.3.2025 ಸೋಮವಾರದಂದು ಮಂಗಳೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ಬಗ್ಗೆ ಸಮಾಲೋಚನಾ ಸಭೆ ನಡೆಯಲಿದೆ ಎಂಬ ಮಾಹಿತಿ ಇತ್ತು. ಆದರೆ ಈವರೆಗೆ ಯಾವುದೇ ಸಭೆ ನಡೆದಿಲ್ಲ.!
ತೌಳವ ಸಂಸ್ಕೃತಿ ರಕ್ಷಣೆಗಾಗಿ ನಡೆಯುತ್ತಿರುವ ಈ ಗಂಭೀರ ಹೋರಾಟವನ್ನು ಅತ್ಯಂತ ಹಗುರವಾಗಿ ತೆಗೆದುಕೊಂಡಿರುವ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹೋರಾಟದ ಮೂಲಕವೇ ಉತ್ತರ ನೀಡುವುದು ಅನಿವಾರ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಮೊದಲ ಹಂತದ ಜನ ಜಾಗೃತಿ ಕಾರ್ಯಕ್ರಮ 18.03 2025ರ ಮಂಗಳವಾರ ಬೆಳಿಗ್ಗೆ 9.30 ಕ್ಕೆ ನಡೆಸುವುದೆಂದು ತೀರ್ಮಾನಿಸಿದ್ದೇವೆ.
ಬಜ್ಪೆಯ ಶಕ್ತಿ ಮಂಟಪದಿಂದ ನೆಲ್ಲಿದಡಿ ಗುತ್ತಿನವರೆಗೆ ಬೃಹತ್ ಸಂಖ್ಯೆಯಲ್ಲಿ ತುಳು ನಾಡಿನ ವಿವಿಧ ದೈವ ಕ್ಷೇತ್ರದ ಗಡಿ ಪ್ರಧಾನರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ.
ಈ ಜನಾಂದೋಲನ ಕಾರ್ಯಕ್ರಮಕ್ಕೆ ಸಜ್ಜನ ನಾಗರಿಕರು , ದೈವ ಭಕ್ತರು, ತುಳುವ ಮಣ್ಣಿನ ಮಕ್ಕಳು, ಜಾತಿ ಮತ ಭಾಷೆ ಪ್ರಾದೇಶಿಕತೆಯ ಪರಿಭೇದ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸು ವಂತೆ ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ..
ಜೈ ಮಹಾಕಾಲ್..