ದಿವ್ಯಾಂಗರ ಸೇವೆ ಮಾಡುವುದೇ ದೇವರ ಸೇವೆ ಅದಕ್ಕೋಸ್ಕರ ಕೊಡವೂರು ವಾರ್ಡಿನಲ್ಲಿ ದಿವ್ಯಾಂಗರನ್ನೇ ಸಂಘಟನೆ ಮಾಡಿ 19 ಜನ ದಿವ್ಯಾಂಗರನ್ನು ಸಂಘಟಿಸಿ ಅವರಿಂದ ಅವರಿಗೆ ಬೇಕಾಗುವ ಅವರ ಮೂಲಕವೇ ಮಾಡುವಂತಹ ಕಾರ್ಯ ಗುಜರಿ ಸಾಮಾಗ್ರಿಗಳ ಸಂಗ್ರಹ. ಯಾರ ಮನೆಯಲ್ಲಿ ಪೇಪರ್ ಕಬ್ಬಿಣ ಪ್ಲಾಸ್ಟಿಕ್ ಬೇಡವಾದಂತಹ ವಸ್ತುವನ್ನು ಸಂಗ್ರಹ ಮಾಡಿ ದಿವ್ಯಾಂಗರ ಸೇವೆಗಾಗಿ ಗುಜರಿ ಸಂಗ್ರಹ ಕೊಡವೂರಿನಲ್ಲಿ ನಡೆಯುತ್ತಿದೆ. ಈ ಮುಖಾಂತರ ಅಲ್ಲಿ ಬೇಕಾಗುವ ಎಲ್ಲರಿಗೂ ವೈದ್ಯಕೀಯ ನೆರವು, ಮನೆ ನಿರ್ಮಾಣಕ್ಕೆ ನೆರವು, ವಿದ್ಯಾಭ್ಯಾಸಕ್ಕೆ ನೆರವು ಮತ್ತು ಸ್ವಂತ ಉದ್ಯೋಗಕ್ಕೆ ನೆರವು ದಿವ್ಯಾಂಗರ ಸೇವೆ ದಿನನಿತ್ಯ ನಡೆಯುತ್ತಿದೆ. ಸ್ಪಂದನ ವಿಶೇಷ ದಿವ್ಯಾಂಗರ ತರಬೇತಿ ಕೇಂದ್ರದ ವತಿಯಿಂದ ಹಲವಾರು ಬಾರಿ ತಮಗೆ ಉಪಯೋಗವಿಲ್ಲದ ಗುಜುರಿ ವಸ್ತುವನ್ನು ದಿವ್ಯಾಂಗರ ಸೇವೆಗಾಗಿ ನೀಡಿ ಸಹಕಾರ ನೀಡಿರುತ್ತಾರೆ. ಕೊಡವೂರಿನ ನಗರಸಭಾ ಸದಸ್ಯರ ಅಭಿಪ್ರಾಯದ ಪ್ರಕಾರ ಈ ರೀತಿ ನಿಸ್ವಾರ್ಥವಾಗಿ ಸೇವೆ ಮಾಡಿದರೆ ಖಂಡಿತವಾಗಿಯೂ ಜನಗಳು ನಮ್ಮ ಜೊತೆ ಇದ್ದು ಅದಕ್ಕೆ ಸಹಕಾರ ಕೊಡುತ್ತಾರೆ. ಇದುವರೆಗೂ ಜಿಲ್ಲೆಯಲ್ಲಿರುವಂತಹ ಅನೇಕರಿಗೆ ವಾಕರ್, ವೀಲ್ ಚೇರ್, ಔಷಧಿ ಕಿಟ್ ಮತ್ತು ಆಹಾರ ಕಿಟ್ ವಿತರಣೆ ಬಹುದೊಡ್ಡ ಸೇವಾ ಕಾರ್ಯ ದಿವ್ಯಾಂಗ ರಕ್ಷಣಾ ಸಮಿತಿ ಉಡುಪಿ ಜಿಲ್ಲೆ ವತಿಯಿಂದ ನಡೆಯುತ್ತದೆ ಎಂದು ನಗರಸಭಾ ಸದಸ್ಯರು ತಿಳಿಸಿದರು. ಈ ಸಂದರ್ಭದಲ್ಲಿ ಸ್ಪಂದನ ವಿಶೇಷ ದಿವ್ಯಾಂಗರ ತರಬೇತಿ ಕೇಂದ್ರದ ಸಂಸ್ಥಾಪಕರಾದ ಜನಾರ್ಧನ್, ದಿವ್ಯಾಂಗ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಹರೀಶ್ ಕೊಪ್ಪಲ್ ತೋಟ ಕಾರ್ಯದರ್ಶಿಗಳಾದ ಜಯ ಪೂಜಾರಿ ಕಲ್ಮಾಡಿ ಸಮಾಜ ಸೇವಕರಾದ ಅಖಿಲೇಶ್ ಎ ಉಜಿರೆ ಮತ್ತು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್ ಉಪಸ್ಥಿತರಿದ್ದರು.