Header Ads Widget

ಮಹಿಮ್ ಟ್ರೋಫಿ-2025

ಅಂಗಡಿಬೆಟ್ಟು:, ಮಾರ್ಚ್ 8, 2025 – ಹಿರೇಬೆಟ್ಟು ಪ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಮಹಿಮ್ ಕುಮಾರ್ ಹೆಗ್ಡೆಯವರ ಸವಿನೆನಪಿಗಾಗಿ  ಮಹಿಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್ ಭರ್ಜರಿ ಯಾಗಿ ನಡೆಯಿತು. ಅಂಗಡಿಬೆಟ್ಟು ಮೈದಾನದಲ್ಲಿ ಸಂಜೆ 6 ಗಂಟೆಗೆ ಉದ್ಘಾಟನಾ ಸಮಾರಂಭ ಜರು ಗಿತು. 


ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ  ಶ್ರೀ ಶಿವಪ್ರಸಾದ್ ಹೆಗ್ಡೆ (ಉದ್ಯಮಿ), ಶ್ರೀ ಕೃಷ್ಣ ಪ್ರಸಾದ್ ಶೆಟ್ಟಿ (ಹಿರೇಬೆಟ್ಟು ಉದ್ಯಮಿ), ಶ್ರೀ ಪ್ರವೀಣ್ ಪೂಜಾರಿ (ಹಿರೇಬೆಟ್ಟು ಉದ್ಯಮಿ), ಶ್ರೀ ಶ್ರೀಧರ್ ಭಟ್ (ಪುರೋಹಿತ್, ನೆಲ್ಲಿಕಟ್ಟೆ), ಶ್ರೀ ಹರೀಶ್ ಶೆಟ್ಟಿ (ಬಾಳ್ಕಟ್ಟ ಆತ್ರಾಡಿ, ಹಿರೇಬೆಟ್ಟು ಪಂಚಾಯತ್ ಅಧ್ಯಕ್ಷರು), ಶ್ರೀ ನಿಧಿ ಹೆಗ್ಡೆ (ಹಿರೇಬೆಟ್ಟು ಖ್ಯಾತ ವಕೀಲರು), ಶ್ರೀ ಗುರುದಾಸ್ ಭಂಡಾರಿ (ಹಿರೇಬೆಟ್ಟು ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರು), ಶ್ರೀ ನಾರಾಯಣ ಪೂಜಾರಿ (ನೆಲ್ಲಿಕಟ್ಟೆ, ಚಿಕ್ಕಿ ಜನರಲ್ ಸ್ಟೋರ್), ಶ್ರೀ ಸುಧೀರ್ ಕುಮಾರ್ ಪಟ್ಲ (ಆತ್ರಾಡಿ ಹಿರೇಬೆಟ್ಟು ಪಂಚಾಯತ್ ಸದಸ್ಯರು), ಶ್ರೀ ಸುಜಿತ್ ಹೆಗ್ಡೆ ಬಾಳ್ಕಟ್ಟ ಸ್ನೇಹ ಯೂತ್ ಕ್ಲಬ್ ನ ಗೌರವಾಧ್ಯಕ್ಷರು ಹಾಗೂ ಸುರೇಶ್ ನಾಯ್ಕ (ಹಿರೇಬೆಟ್ಟು ಆತ್ರಾಡಿ ಹಿರೇಬೆಟ್ಟು ಪಂಚಾಯತ್ ಸದಸ್ಯರು) ಉಪಸ್ಥಿತರಿದ್ದರು 


ಆಸಕ್ತಿದಾಯಕ ಫೈನಲ್ ಪಂದ್ಯದಲ್ಲಿ ಲಶಿಕ್ ಸ್ಟ್ರೈಕರ್ಸ್ ತಂಡವು ಅದ್ಭುತ ಪ್ರದರ್ಶನ ನೀಡಿದ್ದು, ಶ್ರೀ ಸಾಯಿ ಕ್ರಿಕೆಟರ್ಸ್ ವಿರುದ್ಧ ಜಯ ಸಾಧಿಸಿತು. ಲಶಿಕ್ ಸ್ಟ್ರೈಕರ್ಸ್ ತಂಡ  ಮಹಿಮ್ ಟ್ರೋಫಿ ಗೆದ್ದುಕೊಂಡರೆ, ಶ್ರೀ ಸಾಯಿ ಕ್ರಿಕೆಟರ್ಸ್ ತಂಡವು  ರನ್ನರ್-ಅಪ್ ಟ್ರೋಫಿ ಪಡೆಯಿತು.


ವೈಯಕ್ತಿಕ ಪ್ರಶಸ್ತಿಗಳು:

ಪಂದ್ಯಶ್ರೇಷ್ಠ (Man of the Match): ಶಿವಪ್ರಸಾದ್ (ಲಶಿಕ್ ಸ್ಟ್ರೈಕರ್ಸ್)

ಸರಣಿ ಶ್ರೇಷ್ಠ (Man of the Series): ಕೀರ್ತನ್ ಶೆಟ್ಟಿ (ಲಶಿಕ್ ಸ್ಟ್ರೈಕರ್ಸ್)

ಉತ್ತಮ ದಾಂಡಿಗ (Best Batsman): ವಿಕ್ರಮ್ ಭಟ್ (ಶ್ರೀ ಸಾಯಿ ಕ್ರಿಕೆಟರ್ಸ್)

 ಉತ್ತಮ ಎಸೆತಗಾರ (Best Bowler): ಸುಧಾಕರ್ (ಮೈಟಿ ಸಾಗು)


ಸಮಾರೋಪ ಸಮಾರಂಭ

ಈ ಯಶಸ್ವಿ ಟೂರ್ನಮೆಂಟ್‌ಗಾಗಿ ಹಿರೇಬೆಟ್ಟು ಪ್ರೆಂಡ್ಸ್ ತಂಡ ಶ್ಲಾಘನೆ ಪಡೆಯಿತು. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಕ್ರಿಕೆಟ್ ಹಬ್ಬವನ್ನೇ ಸೃಷ್ಟಿಸಿದ ಈ ಸ್ಪರ್ಧೆ, ಮುಂದಿನ ವರ್ಷಗಳು ಇನ್ನಷ್ಟು ಹೆಚ್ಚಿನ ಉತ್ಸಾಹ ವನ್ನು ತರಲಿದೆ ಎಂದು ಸಂಘಟಕರು ಭರವಸೆ ವ್ಯಕ್ತಪಡಿಸಿದರು.