ಉಡುಪಿ ನಗರ ಸಭೆಯೊಂದಾಗಿರುವಂತಹ ಕೊಡವೂರು ವಾರ್ಡ್ ಇದು ದಿನನಿತ್ಯ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುತ್ತದೆ. ತಿಂಗಳಿಗೆ ಒಂದು ಸೇವ ಕಾರ್ಯ ಮಾಡುತ್ತಿರುವ ದಿವ್ಯಾಂಗ ರಕ್ಷಣಾ ಸಮಿತಿ ದುಡಿಯಲು ಸಾಧ್ಯವಿಲ್ಲದವರಿಗೆ ಔಷದಿ ಕಿಟ್ ವಿತರಣೆ,ಆಹಾರ ಕಿಟ್ ವಿತರಣೆ, ವೀಲ್ ಚೇರ್ ವಾಕರ್ ನಂತಹ ದಿವ್ಯಾಂಗರ ಅಗತ್ಯ ಸಾಮಗ್ರಿಗಳ ವಿತರಣಾ ಕಾರ್ಯ ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ಮತ್ತು ಕೊಡವೂರು ವಾರ್ಡ್ ನಲ್ಲಿ ಅನೇಕ ಸೇವಾಕಾರ್ಯಗಳು ನಡೆಯುತ್ತಿದೆ. ಈ ಸೇವಾ ಕಾರ್ಯವನ್ನು ಗಮನಿಸಿ ಮತ್ಸ್ಯ ರಾಜ ಗ್ರೂಪ್ಸ್ ಮಲ್ಪೆ ವತಿಯಿಂದ ಅದರ ಮುಖ್ಯಸ್ಥರಾದ ಶ್ರೀಯುತ ಕೇಶವ ಎಮ್ ಕೋಟ್ಯಾನ್ ಮತ್ತು ಅಭಿನಂದನ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಕೊಡವೂರು ವಾರ್ಡಿಗೆ ಶವವನ್ನು ಸ್ನಾನ ಮಾಡಿಸುವಂತಹ ಸ್ಟೀಲ್ ಸ್ಟ್ರಕ್ಚರನ್ನು ಕೊಡವೂರು ವಾರ್ಡ್ ಗೆ ಹಸ್ತಾಂತರ ಮಾಡಿರುತ್ತಾರೆ. ಈ ಸೇವೆಯನ್ನು ಉಚಿತವಾಗಿ ನಿಸ್ವಾರ್ಥವಾಗಿ ಕೊಡವೂರು ವಾರ್ಡ್ ನ ಜನತೆಗೆ ನೀಡುತ್ತೇವೆ ಎಂದು ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕರು ಹಾಗೂ ಕೊಡವೂರು ವಾರ್ಡ್ ನ ನಗರಸಭಾ ಸದಸ್ಯರಾದ ಶ್ರೀಯುತ ಕೆ ವಿಜಯ ಕೊಡವೂರು ಈ ಸಂದರ್ಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಮತ್ಸ್ಯರಾಜ ಗ್ರೂಪ್ಸ್ ನ ಪ್ರಮುಖರಾದ ಕೇಶವ ಎಂ ಕೋಟ್ಯಾನ್ ಮತ್ತು ಅಭಿನಂದನ್ ಕೋಟ್ಯಾನ್, ಕೊಡವೂರು ಸಹಕಾರಿ ಸಂಘದ ಅಧ್ಯಕ್ಷರಾದ ನಾರಾಯಣ ಬಲ್ಲಾಳ್, ಕೊಡವೂರು ಕೆನರಾ ಬ್ಯಾಂಕ್ ನ ಮ್ಯಾನೇಜರ್ ಆದ ವಿನಯ್ ಕುಮಾರ್, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ಯು ಆರ್ ಡಬ್ಲ್ಯೂ ಸರ್ವೋತ್ತಮ್ ಹೆರ್ಗ, ದಿವ್ಯಾಂಗ ರಕ್ಷಣಾ ಸಮಿತಿಯ ಕಾರ್ಯದರ್ಶಿಗಳಾದ ಜಯ ಪೂಜಾರಿ ಕಲ್ಮಾಡಿ, ಎಸ್ ಟಿ ಮೋರ್ಚದ ಕಾರ್ಯದರ್ಶಿಗಳಾದ ವಿನಯ್ ನಾಯ್ಕ್, ಸಮಾಜ ಸೇವಕರಾದ ಅಖಿಲೇಶ್. ಎ ಉಜಿರೆ ಕೊಡವೂರಿನ ಗ್ರಾಮಸ್ಥರು ಉಪಸ್ಥಿತರಿದ್ದರು.