ಹೊಸ ಅವತರಣಿಕೆಯ ಮೊಗೇರಿ ಪಂಚಾಂಗ ಅಂತರ್ಜಾಲ (moregipanchangam.com, mogeripanchangam.in), ವಿಶ್ವಾವಶು ಸವಂತ್ಸರದ ಚಂದ್ರಮಾನ ಯುಗಾದಿಯ ದಿನದಂದು(30-Mar-2025) ಪಂಚಾಂಗ ಶ್ರವಣ, ಗೋಪೂಜೆ, ವಿಷ್ಣು ಸಹಸ್ರನಾಮ , ಭಜನೆಗಳೊಂದಿಗೆ, ಶ್ರೀ ಕ್ಷೇತ್ರ ಭಗವತಿ ದೇವಳ, ಕೆರ್ಗಾಲು , ಬೈಂದೂರಿನಲ್ಲಿ ಅನಾವರಣಗೊಂಡಿದೆ.
ಇದರಲ್ಲಿ ವಿಶೇಷವಾಗಿ ಈ ಕೆಳಕಂಡ ಹೊಸತನಗಳನ್ನು ಸೇರಿಸಲಾಗಿದೆ.
*೧. ಪಕ್ಷದಲ್ಲಿ ಬರುವ ಗೃಹಸ್ಪುಟಗಳನ್ನು ಅಳವಡಿಸಲಾಗಿದೆ.
೨. ವಿಶೇಷ ಹಬ್ಬ ಹರಿದಿನಗಳ ಸಂಕ್ಷಿಪ್ತವಾದ ವಿವರಣೆಯನ್ನು ಚಿತ್ರದೊಂದಿಗೆ ಕೊಡಲಾಗಿದೆ.
೩. ರೂಪರೇಷೆಗಳನ್ನು ವರ್ತಮಾನಕ್ಕೆ ಸರಿಯಾಗಿ,ಇನ್ನೂ ಹೆಚ್ಚು ಸಂವಾದಾತ್ಮಕವಾಗಿ ಮಾಡ ಲಾಗಿದೆ.
೪. ಸಂಕಷ್ಟಹರ ಚತುರ್ಥಿ, ಏಕಾದಶಿ, ಪಕ್ಷ ಪ್ರ ದೋಷ ಹರಿವಾಸ, ೯೬ ಶ್ರಾಧ್ಧಗಳು, ವಿಶೇಷ ಹಬ್ಬದ ದಿನಗಳ ಪಟ್ಟಿಯನ್ನು ಧರ್ಮಾಭಿಮಾನಿಗಳ ಅನುಕೂಲಕ್ಕೆ ಅಳವಡಿಸಲಾಗಿದೆ.
೫. ಸೂರ್ಯ ಸಿದ್ದಾಂತ ಫೌಂಡೇಶನ್ , ಪಂಚಾಂಗ ಮಂದಿರದಿಂದಾದ ಕಾರ್ಯಕ್ರಮಗಳ ಚಿತ್ರ ಗಳನ್ನು ಹಾಗು ಶ್ರೀಮತಿ ಅನುರಾಧ ಉರಾಳರು ದಿನ ಬಿಡಿಸುವ ಅಪರೂಪ ಶೈಲಿ ಯ ರಂಗೋಲಿಗಳನ್ನು ಸೇರಿಸಲಾಗಿದೆ.*
ಈ ಪಂಚಾಂಗ ಅಂತರ್ಜಾಲದ ಹೊಸ ಅವೃತ್ತಿಯನ್ನು ತಾಂತ್ರಿಕರಣಗೊಳಿಸಿದ ಶ್ರೀಮತಿ ಶಾಂತಲಕ್ಶ್ಮೀ. ಟಿ. ರಾವ್, ಶ್ರೀ ನವೀನ್ ಅವರಿಗೂ, ಹಿಂದಿನ ಅಂತರ್ಜಾಲದ ಅವೃತ್ತಿಯನ್ನು ನಿರ್ವಹಿಸುತ್ತಿದ್ದ (ಸುಮಾರು ೧೩ ವರ್ಷಗಳಿಂದ) ಶ್ರೀ ಗುರುರಾಜ ಮಯ್ಯರಿಗೂ, ಪ್ರಕಾಶನ ಗೊಳಿಸಲು ಸಹಕರಿಸಿದ ಎಲ್ಲಾ ಬಂಧು ಬಾಂದವರಿಗೂ, ಮಿತ್ರರಿಗೂ ಪಂಚಾಂಗ ಕರ್ತರಾದ ಅನುಪಮಾ ಮತ್ತು ಜನಾರ್ದನ ಅಡಿಗರು ಕೃತಙ್ಞತೆಗಳನ್ನು ಸಲ್ಲಿಸಿರುತ್ತಾರೆ.
ಪಂಚಾಂಗವನ್ನುಗಣಿಕೃತಗೊಳಿಸಿ, ಅಂತರ್ಜಾಲದಲ್ಲಿ ಬಿಡುಗಡೆಗೊಳಿಸಲು ಮುಖ್ಯ ಕಾರಣರಾದ ಹಾಗು ಸೂರ್ಯ ಸಿದ್ದಾಂತ ಫೌಂಡೇಶನ್ ಸಂಸ್ಥಾಪಕರಾದ ದಿವಂಗತ ವೇದ ಮೂರ್ತಿಮತ್ತು ಅವರ ಪತ್ನಿ ಶ್ರೀಮತಿ ಮೊಗೇರಿ ಲಲಿತ ಅಡಿಗರಿಗೂ ಪಂಚಾಂಗ ಕರ್ತರು ಚಿರ ಋಣಿರಾಗಿದ್ದಾರೆ.
ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಪಂಚಾಂಗ ಅಂತರ್ಜಾಲದಲ್ಲಿ ಅಳವಡಿಸಲಾಗುವುದು, ಅಸಕ್ತರು ಅವರಿಗೆ ಸಲಹೆಗಳನ್ನು ಸೂಚಿಸಬಹುದು. (email id :mogeripanchagam@gamil.com)
ಆನುಪಮಾ ಅಡಿಗ ಮತ್ತು ಶ್ರೀ ಜನಾರ್ದನ ಅಡಿಗ, ಪಂಚಾಂಗ ಮಂದಿರ, ಮೊಗೇರಿ
೯೬೬೩೭೧೦೦೭೩