ದಿನಾಂಕ 17-03-2025 ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಳಕಾಡು ಉಡುಪಿ ಇಲ್ಲಿ ಕೆನರಾ ಬ್ಯಾಂಕ್ ಕ್ಯಾಥೋಲಿಕ್ ಸೆಂಟರ್ ಶಾಖೆ, ಉಡುಪಿ ಇವರ ಸಿ. ಎಸ್. ಆರ್. ಯೋಜನೆಯಿಂದ ಪ್ರಾಯೋಜಿತ ಪೀಠೋಪಕರಣಗಳ ಹಸ್ತಾಂತರ ಸಮಾರಂಭ ಜರುಗಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ಆಂಟೋನಿ ಇರುದಯ ಡಿಕ್ಸನ್ ಈ ಜೆ, ವಿಭಾಗೀಯ ವ್ಯವಸ್ಥಾಪಕರು, ಕ್ಯಾಥೋಲಿಕ್ ಸೆಂಟರ್ ಶಾಖೆ, ಕೆನರಾ ಬ್ಯಾಂಕ್ ಉಡುಪಿ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಡಾ. ವಿರೂಪಾಕ್ಷ, ಪ್ರೌಢಶಾಲೆ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಮೇಶ್ ಹೆಗ್ಡೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಶೇಟ್, ಕಾರ್ಯದರ್ಶಿಗಳಾದ ನಾಗೇಶ್ ಪ್ರಭು, ಎಸ್ ಡಿ ಎಂ ಸಿ ಸದಸ್ಯರಾದ ಶ್ರೀಯುತ ಪ್ರಶಾಂತ್, ರಮೇಶ್, ನಾರಾಯಣ ಆಚಾರ್ಯ, ಝೆಡ್. ಪಿ. ಸರಕಾರಿ ಪ್ರೌಢ ಶಾಲಾ ಎಜುಕೇಷನಲ್ ಸಮಿತಿಯ ಸದಸ್ಯರಾದ ಮಾರುತಿ ಪ್ರಭು ಉಪಸ್ಥಿತರಿದ್ದರು. ಶ್ರೀಯುತ ಆಂಟೋನಿ ಇರುದಯ ಡಿಕ್ಸನ್ ಈ. ಜೆ. ಅವರು ಪೀಠೋಪಕರಣಗಳನ್ನು ಮುಖ್ಯ ಶಿಕ್ಷಕರು ಹಾಗೂ ಎಸ್. ಡಿ. ಎಂ. ಸಿ. ಅಧ್ಯಕ್ಷರಿಗೆ ಹಸ್ತಾಂತರಿಸಿ ಶಾಲೆಯ ಅಭಿವೃದ್ಧಿಗೆ ಮುಂದೆಯೂ ತಮ್ಮ ಬ್ಯಾಂಕ್ ನ ವತಿಯಿಂದ ಸಹಕರಿಸುವುದಾಗಿ ಭರವಸೆಯಿತ್ತರು. ಮುಖ್ಯ ಶಿಕ್ಷಕಿ ಶ್ರೀಮತಿ ಕುಸುಮ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಸುವಾಸಿನಿ ಕಾರ್ಯಕ್ರಮ ನಿರೂಪಿಸಿದರು ಸಹ ಶಿಕ್ಷಕಿ ಲಲಿತ ವಂದನಾರ್ಪಣೆಗೈದರು.