Header Ads Widget

ಕಾರ್ಕಳ: ಪತಿಯ ಕೊಲೆಗೈದ ಪ್ರಕರಣ; ಆರೋಪಿ ಪತ್ನಿಯ ಜಾಮೀನು ಅರ್ಜಿ ತಿರಸ್ಕಾರ!

ಕೆಲವು ತಿಂಗಳುಗಳ ಹಿಂದೆ ಕಾರ್ಕಳದ ಅಜೆಕಾರಿನಲ್ಲಿ ಮಹಿಳೆಯೋರ್ವಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. 

ಇದೀಗ ಈ ಪ್ರಕರಣದ ಪ್ರಮುಖ ಆರೋಪಿ ಮೃತರ ಪತ್ನಿ ಪ್ರತಿಮಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ರಿಜೆಕ್ಟ್ ಮಾಡಿ ಆದೇಶ ಹೊರಡಿಸಿದೆ.

ತನ್ನ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿ ಪ್ರತಿಮಾ ತನ್ನ ಪತಿ ಬಾಲಕೃಷ್ಣ ಪೂಜಾರಿ ಅವರನ್ನು ಸ್ಲೋ ಪಾಯ್ಸನ್ ನೀಡಿ ಕೊಲೆ ಮಾಡಿದ್ದಳು. ಅಜೆಕಾರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.

ಆರೋಪಿ ದಿಲೀಪ್‌ ಹೆಗ್ಡೆಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ಈಗಾಗಲೇ ತಿರಸ್ಕರಿಸಿದೆ. 

ಇದೀಗ ನ್ಯಾಯಾಂಗ ಬಂಧನದಲ್ಲಿರುವ ಪ್ರತಿಮಾರ ಜಾಮೀನು ಅರ್ಜಿ ಕೂಡಾ ತಿರಸ್ಕರಿಸಲಾಗಿದೆ