Header Ads Widget

ಸುವರ್ಣಮಯ ಸರ್ವಜ್ಞ ಪೀಠಕ್ಕೆ ಚಾಲನೆ

ಪೊಡವಿಗೊಡೆಯ ಉಡುಪಿ ಶ್ರೀಕೃಷ್ಣನನ್ನು ಪ್ರತಿಷ್ಠಾಪನೆಗೈದ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಸನ್ನಿಧಾನವುರುವ ಸರ್ವಜ್ಞ ಪೀಠಕ್ಕೆ ಸುವರ್ಣವನ್ನು ಹೊದೆಸಿ ಅಪೂರ್ವ ಸುವರ್ಣ ಪೀಠವನ್ನು ಅರ್ಪಣೆ ಮಾಡುವ ಬೃಹತ್ ಪುಣ್ಯ ಕಾರ್ಯಕ್ಕೆ ಪೂಜ್ಯ ಪರ್ಯಾಯ ಶ್ರೀಪಾದರು ಕಿರಿಯ ಶ್ರೀಪಾದರೊಂದಿಗೆ ಶ್ರೀಕೃಷ್ಣ ಮುಖ್ಯಪ್ರಾಣ ರಲ್ಲಿ ಪ್ರಾರ್ಥನೆ ಸಲ್ಲಿಸಿ ಚಾಲನೆ ನೀಡಿದರು.

ಶ್ರೀ ಮಠದ ಶಿಷ್ಯರಾದ ದೇಶದ ಪ್ರತಿಷ್ಟೆಯ ಕಾಳಿದಾಸ ಸಮ್ಮಾನ್ ಪ್ರಶಸ್ತಿ ವಿಜೇತರಾದ ಖ್ಯಾತ ಕಲಾವಿದ ರಾದ ಶ್ರೀಗಂಜೀಫಾ ರಘುಪತಿ ಭಟ್ಟರು ತಮ್ಮ ತಂಡದವರೊಡನೆ ಈ ಸೂಕ್ಷ್ಣ ಕಾರ್ಯವನ್ನು ಮಾಡಿ ಮುಗಿಸಲಿದ್ದಾರೆ.

ಪೂಜ್ಯ ಹಿರಿಯ ಶ್ರೀಪಾದರ ಆಶ್ರಮ ಸ್ವೀಕಾರ ನಡೆದು ಐವತ್ತರ ವರ್ಷಕ್ಕೆ ,ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಅರ್ಪಣೆಗೊಳ್ಳುವ ಈ ಸುವರ್ಣ ಪೀಠ ಸಮರ್ಪಣೆ ಯೋಜನೆಗೆ ಭಕ್ತಾದಿಗಳು ಕೂಡ ಪಾಲ್ಗೊಳ್ಳಬಹುದೆಂದು ತನ್ಮೂಲಕ ಈ ಅಪೂರ್ವ ಅವಕಾಶದಲ್ಲಿ ಭಾಗಿಗಳಾಗಬಹುದೆಂದು ಪರ್ಯಾಯ ಮಠದ ದಿವಾನರು ತಿಳಿಸಿರುತ್ತಾರೆ.