ಇತ್ತೀಚಿಗೆ ಮಲ್ಪೆಯಲ್ಲಿ ನಡೆದ ಘಟನೆಯನ್ನು ಆಧರಿಸಿ, ಸರಕಾರದ ಒತ್ತಡಕ್ಕೆ ಮಣಿದು ಕರಾವಳಿ ನಾಯಕ ಪ್ರಮೋದ್ ಮದ್ವರಾಜ್ ಹಾಗೂ ಹಿಂದೂ ಮುಖಂಡ ಮುಂಜು ಕೊಳ ಇವರ ಮೇಲೆ ಸ್ವಯಂ ಪ್ರೇರಿತ ಕೇಸ್ ದಾಖಲು ಮಾಡಿದ ಉಡುಪಿ ಪೋಲಿಸ್ ಇಲಾಖೆಯ ಕ್ರಮವನ್ನು ಶ್ರೀರಾಮಸೇನೆಯ ಮಂಗಳೂರು ವಿಭಾಗ ಕಾರ್ಯಧ್ಯಕ್ಷ ಜಯರಾಂ ಅಂಬೆಕಲ್ಲು ತೀವ್ರವಾಗಿ ಖಂಡಿಸಿದ್ದಾರೆ.
ಘಟನೆಯ ಸತ್ಯಾಸತ್ಯತೆಯನ್ನು ಅರಿತು ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಬಂದಿಸಿದವರ ಮೇಲೆ ಹಾಕಿದ ಕೇಸ್ ಮತ್ತು ನಾಯಕರ ಮೇಲೆ ಪೊಲೀಸ್ ರವರು ಹಾಕಿದ ಸ್ವಯಂ ಪ್ರೇರಿತ ಕೇಸ್ ನ್ನು ವಾಪಾಸ್ ಪಡೆಯಬೇಕೆಂದು ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಯನ್ನು ಅಂಬೆಕಲ್ಲು ಅಗ್ರಹಿಸಿದ್ದಾರೆ .