ಉಡುಪಿ ನಗರಸಭೆ ವತಿಯಿಂದ ಸುಮಾರು ₹ 66 ಲಕ್ಷ ವೆಚ್ಚದಲ್ಲಿ ನಡೆಯಲಿರುವ ಬೈಲೂರು ಮಿಷನ್ ಕಾಂಪೌಂಡ್ ಜಂಕ್ಷನ್ ರಸ್ತೆ ಕಾಂಕ್ರಿಟೀಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಈ ರಸ್ತೆಯ ಕಾಂಕ್ರೀಟಿಕರಣ ಹಾಗೂ ಚರಂಡಿ ಕಾಮಗಾರಿಗೆ ನಗರಸಭೆ ವತಿಯಿಂದ 66 ಲಕ್ಷ ಅನುದಾನ ಮಂಜೂರು ಮಾಡಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಂಡು ಈ ಭಾಗದ ಜನತೆಯ ಬಹುದಿನದ ಬೇಡಿಕೆ ಈಡೇರಲಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಉಪಾಧ್ಯಕ್ಷರಾದ ಶ್ರೀಮತಿ ರಜನಿ ಹೆಬ್ಬಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ, ನಗರಸಭೆ ಮಾಜಿ ಅಧ್ಯಕ್ಷರಾದ ಶ್ರೀ ಕಿರಣ್ ಕುಮಾರ್ ಬೈಲೂರು, ನಗರಸಭಾ ಸದಸ್ಯರಾದ ಶ್ರೀ ಕೃಷ್ಣ ರಾವ್ ಕೊಡಂಚ, ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀ ಹರೀಶ್ ಶೆಟ್ಟಿ, ಶ್ರೀಮತಿ ವಿಜಯಲಕ್ಷ್ಮೀ, ಸ್ಥಳೀಯ ಮುಖಂಡರಾದ ಶ್ರೀ ರಂಜಿತ್ ದೇವಾಡಿಗ, ಶ್ರೀ ಅರುಣ್ ಕುಮಾರ್, ಶ್ರೀ ದುರ್ಗಾ ಪ್ರಸಾದ್, ಶ್ರೀ ಸುನೀಲ್, ಶ್ರೀ ಪ್ರಮೋದ್ ಆಚಾರ್ಯ, ಶ್ರೀ ಸುರೇಶ್ ಶೆಟ್ಟಿ, ಶ್ರೀ ನಾರಾಯಣ ದಾಸ್ ಉಡುಪ, ಶ್ರೀ ನವೀನ್ ನಿಶ್ಚಲ್, ಶ್ರೀ ವೆಂಕಟೇಶ್ ಪ್ರಭು, ಶ್ರೀ ರತ್ನಾಕರ ಜಿ. ಎಸ್., ಶ್ರೀಮತಿ ಶಾಂತ ಶೇರಿಗಾರ್, ಶ್ರೀ ಶ್ರೀಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.