Header Ads Widget

ಶಿವ - ಜಯ ಟ್ರೋಫಿ 2025

ಎಸ್ಉ ಕೆ ಪಿ ಎ ಉಡುಪಿ ವಲಯದ ವತಿಯಿಂದ ಆಯೋಜನೆ 


ಉಡುಪಿ ; ಸೌತ್ ಕೆನರಾ  ಫೋಟೋಗ್ರಾಫರ್ ಅಸೋಸಿಯೇಶೆನ್ (ರಿ ) ದಕ್ಷಿಣ ಕನ್ನಡ  - ಉಡುಪಿ ಜಿಲ್ಲೆ   ಇದರ ಉಡುಪಿ ವಲಯದ ವತಿಯಿಂದ  ನೆಡೆದ ಶಿವ - ಜಯ ಟ್ರೋಫಿ 2025   ಉಡುಪಿ  ಬೀಡಿನ ಗುಡ್ಡೆಯ ಕ್ರೀಡಾಂಗಣ ದಲ್ಲಿ ನೆಡೆಯಿತು. 


ಉದ್ಘಾಟನೆಯನ್ನು ಉಡುಪಿ ಮದರ್ ಆಫ್ ಸಾರೊಸ್ ಚರ್ಚ್ ಧರ್ಮಗುರುಗಳಾದ ವಂದನೀಯ ಚಾರ್ಲ್ಸ್ ಮಿನೇಜಸ್  ದೀಪ ಬೆಳಗಿಸಿ ಚಾಲನೆ  ನೀಡಿ  ಛಾಯಾಗ್ರಾಹಕರು ತಮ್ಮ ವೃತ್ತಿ ಜೊತೆ ಇಂತಹ  ಕ್ರೀಡಾಕೂಟದಿಂದ ದೈಹಿಕ ಅರೋಗ್ಯ , ಒತ್ತಡ ನಿವಾರಣೆ, ವ್ಯಕ್ತಿ ವಿಕಸನ , ಐಕ್ಯತೆ ಹಾಗೂ  ಸಂಘಟನೆ ಬೆಳವಣಿಗೆ ಪೂರ್ವಕವಾಗಿದ್ದು ಈ ನಿಟ್ಟಿನಲ್ಲಿ ಇಲ್ಲಿ ಸೇರಿದ 14 ವಲಯದ ತಂಡ ಭಾಗವಹಿಸಿರುವುದು ಸಾಕ್ಷಿ ಎಂದು ಶುಭ ಹಾರೈಸಿದರು. 


ಮುಖ್ಯ ಅಥಿತಿಗಳಾಗಿ   ಎಸ್ ಕೆ ಪಿ ಎ ಜಿಲ್ಲಾ ಅಧ್ಯಕ್ಷ ಪದ್ಮಪ್ರಸಾದ್ ಜೈನ್ ,   ಉಡುಪಿ ವಕೀಲ ಸಂಘದ ಅಧ್ಯಕ್ಷರಾದ ರೊನಾಲ್ಡ್ ಪ್ರವೀಣ್ ಕುಮಾರ್ , ಮಾಜಿ ಅಧ್ಯಕ್ಷರಾದ ವಿಲ್ಸ್ ನ್ ಗೊನ್ಸ್ಲಾವೀಸ್ ,   ಎಸ್ ಕೆ ಪಿ ಎ ಸಹಕಾರ ಸೊಸೈಟಿಯ ಅಧ್ಯಕ್ಷ ವಾಸುದೇವ ರಾವ್ ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಬಂಟ್ವಾಳ್ , ಗೌರವಾಧ್ಯಕ್ಷರಾದ ನವೀನ್‌ ಬಳ್ಳಾಲ್ ಹಾಗೂ ಉಡುಪಿ ವಲಯದ  ಕಾರ್ಯದರ್ಶಿ ದಿವಾ ಕರ ಹಿರಿಯಡಕ, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್‌‌ ಕೊರೆಯ, ಸಂಗೊಳ್ಳಿ ರಾಯಣ್ಣ ಬಳಗದ ಅಧ್ಯಕ್ಷ   ಸಿದ್ದ ಬಸ     ಯ್ಯ ಸ್ವಾಮಿ ಚಿಕ್ಕಮಠ. 

 ಹರ್ಷಲಾ  ಧನ್ಯರಾಜ್ , ಸಂದೇಶ್  ಬಲ್ಲಾಳ್ , ಕ್ರೀಡಾ  ಕಾರ್ಯದರ್ಶಿ ಅಶೋಕ್‌ ಪುತ್ರನ್‌, ಕೋಶಾಧಿ ಕಾರಿ ರಮೇಶ್‌ ಎಳ್ಳೂರು ಪಾಧಿಕಾರಿಗಳಾದ  ರತನ್‌ಸುರಭಿ, ಪ್ರವೀಣ್‌ ಕಿದಿಯೂರು ಮತ್ತು ರಮೇಶ್‌ ಕಿದಿಯೂರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ  14 ವಲಯದ ಸದಸ್ಯರು  ಪದಾಧಿಕಾರಿಗಳು ಉಪಸ್ಥಿತರಿದ್ದರು.


  ಉಡುಪಿ ವಲಯಾಧ್ಯಕ್ಷ ಸುಧೀರ್‌ ಎಂ. ಶೆಟ್ಟಿ ಸ್ವಾಗತಿಸಿದರು , ರಾಘವ್ ಸೇರಿಗಾರ ನಿರೂಪಿಸಿದರು ವಲಯಾಧ್ಯಕ್ಷ ಸುಧೀರ್‌ ಎಂ. ಶೆಟ್ಟಿ ಸ್ವಾಗತಿಸಿದರು.