ಶ್ರೀ ಶಾಂತಿಮತೀ ಪ್ರತಿಷ್ಠಾನದ "ಸಾಧಕರೆಡೆ ನಮ್ಮನಡೆ " ತಿಂಗಳ ಕಾರ್ಯಕ್ರಮದ ಅಂಗವಾಗಿ ಸಾಲಿಗ್ರಾಮ ಚಿತ್ರಪಾಡಿಯ ಶ್ರೀಮತಿ ಗೀತಾ ತುಂಗ ಅವರನ್ನು ಸನ್ಮಾನಿಸಲಾಯಿತು. ಸಂಗೀತ ಕ್ಷೇತ್ರದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಅದೆಷ್ಟೋ ವರ್ಷಗಳಿಂದ ಉಚಿತವಾಗಿ ಶಿಷ್ಯ ರಿಗೆ ಸಂಗೀತ ವಿದ್ಯೆಯನ್ನು ಹೇಳಿಕೊಡುವ ಅವರ ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.
ಶಾಂತಿಮತೀ ಪ್ರತಿಷ್ಠಾನದ ಅಧ್ಯಕ್ಷ ನಾಗಭೂಷಣ ಐತಾಳ್ ರು ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಡಾ. ವಿಜಯ್ ಕುಮಾರ್ ಮಂಜರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಚಂದ್ರ ಉಡುಪ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ದಯಾನಂದ ವಾರಂಬಳ್ಳಿ, ಗೀತಾ ತುಂಗ ರ ಪತಿ, ಹಾಗೂ ಶಿಷ್ಯರು ಉಪಸ್ಥಿತರಿದ್ದರು.