Header Ads Widget

ಶಿವಾಜಿ ಪಾರ್ಕ್ ಸಮಿತಿ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ


ದಿನಾಂಕ 23-02-25 ರಂದು ಕೊಡವೂರು ಲಕ್ಷ್ಮಿ ನಗರ ಶಿವಾಜಿ ಪಾರ್ಕ್ ಸಮಿತಿ ವತಿಯಿಂದ ನಡೆದ 7ನೇ ವರ್ಷದ ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತಿ ಆಚರಣೆಯು ಯಶಸ್ವಿಯಾಗಿ ವಿಜೃಂಭಣೆಯಿಂದ ಸಂಪನ್ನಗೊಂಡಿದೆ.

ಕಾರ್ಯಕ್ರಮದ ಉದ್ಘಾಟಕರಾಗಿ ಶಾಸಕರಾದ ಶ್ರೀ ಯಶಪಾಲ್ ಎ ಸುವರ್ಣರು ಭಾಗವಹಿಸಿದ್ದರು.

ಮುಖ್ಯ ಅತಿಥಿಯಾಗಿ ಬಂದು ಸನ್ಮಾನವನ್ನು ‘ಸಹಕಾರ ರತ್ನ’ ಶ್ರೀ ಕೆ. ನಾರಾಯಣ ಬಲ್ಲಾಳರು ಸ್ವೀಕರಿಸಿದರು.ಅತಿಥಿಗಳಾಗಿ

 ಶ್ರೀ ಶಿವರಾಯ ಜಿ ಯೋಗ ಶಿಕ್ಷಕರು ಪತಂಜಲಿ ಯೋಗ ಸಮಿತಿ ಉಡುಪಿ, ಶ್ರೀಮತಿ ಶುಭ ಯೋಗೀಶ್ ಸುವರ್ಣ ಅಧ್ಯಕ್ಷರು ಶ್ರೀ ಮಹಾಲಕ್ಷ್ಮೀ ಮೊಗವೀರ ಮಹಿಳಾ ಮಂಡಳಿ, ಕೊಡವೂರು, ಶ್ರೀಮತಿ ಅನಿತಾ ರಘುವೀರ್, ಅಧ್ಯಕ್ಷರು ಕಾಳಿಕಾಂಭ ಮಹಿಳಾ ಭಜನಾ ಮಂಡಳಿ, ಪುತ್ತೂರು, ದಿಕ್ಸುಚಿ ಭಾಷಣಕಾರರಾಗಿ ಪ್ರಖರ ವಾಗ್ಮಿ ಧಾರ್ಮಿಕ ಚಿಂತಕರೂ ಆದ ಶ್ರೀ ಶ್ರೀಕಾಂತ್ ಶೆಟ್ಟಿ, ಕಾರ್ಕಳ ಉಪಸ್ಥಿತರಿದ್ದರು. ಬಹುಮುಖ್ಯವಾಗಿ ಎಲ್ಲಾ ಕಾರ್ಯಗಳಿಗೆ ಮಾರ್ಗದರ್ಶಕರಾದ ಮತ್ತೊರ್ವ ಅತಿಥಿ, ನಗರಸಭಾ ಸದಸ್ಯರು ಹಾಗೂ ಸ್ಟೇಜ್ ಮತ್ತು ಆಸನ ವ್ಯವಸ್ಥೆಯನ್ನು ಮಾಡಿದ ಶ್ರೀ ಕೆ ವಿಜಯ್ ಕೊಡವೂರು ಭಾಗವಹಿಸಿದ್ದರು. ಧ್ವನಿ ವರ್ಧಕ ಮತ್ತು ಬೆಳಕಿನ ವ್ಯವಸ್ಥೆ ಶ್ರೀ ಸುಜಿತ್ ಮತ್ತು ತಂಡ ಮಾಡಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮಕ್ಕಳಾದ ಕುಮಾರಿ ಸಿಂಚನ (ಕಲಿಯುದರಲ್ಲಿ), ಕುಮಾರ ಉತ್ಸವ (ಆಟೋಟದಲ್ಲಿ) ಮತ್ತು ಕುಮಾರಿ ತನ್ಮಯೀ ಅಡಿಗ (ಕಲಾ ರಂಗದಲ್ಲಿ) ಅವರನ್ನು ಸನ್ಮಾನಿಸಿತು.

 "ನಿಕುಲ್ ತೆಲಿಪುಲೆ" ನಗೆ ನಾಟಕವನ್ನು ಕಲಾ ಚಾವಡಿ ಉಡುಪಿ ತಂಡದವರು ಪ್ರದರ್ಶಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಕ್ಕಳು ಮತ್ತು ಸ್ಥಳೀಯರು ನೀಡಿ ಚಂದಗಾಣಿಸಿದರು. ಶ್ರೀ ಸತೀಶ್ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು.. 

ಈ ಕಾರ್ಯಕ್ರಮನ್ನು ಯಶಸ್ವಿಯಾಗಿ ನೆರವೇರಲು ಶ್ರಮಿಸಿದ ಸಮಿತಿಯ ಎಲ್ಲಾ ಸದಸ್ಯರಿಗೆ , ಯುವ ತರುಣರ ತಂಡದವರಿಗೆ, ಪುಟಾಣಿ ಮಕ್ಕಳಿಗೆ, ಹಿರಿಯರಿಗೆ, ಅಂದು ಬೆಳಗ್ಗೆ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾರ್ಥಿಗಳಿಗೆ, ರಂಗೋಲಿ ಸ್ಪರ್ಧೆಯ ತೀರ್ಪುಗಾರರಿಗೆ ಶಿವಾಜಿ ಪಾರ್ಕ್ ಸಮಿತಿಯ ಅಧ್ಯಕ್ಷರು / ಕಾರ್ಯದರ್ಶಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.