ಎರಡುವರೆ ದಶಕ ಕಾಂತಾವರ, ಪುತ್ತೂರು, ಬಪ್ಪನಾಡು, ಸುಂಕದಕಟ್ಟೆ, ಸುರತ್ಕಲ್ ಮೇಳಗಳಲ್ಲಿ ಹಾಗು ದೀರ್ಘ ಕಾಲ ಹಲವು ಸಂಘಗಳಲ್ಲಿ ಕಲಾಸೇವೆಗೖದ ತೆಂಕುತಿಟ್ಟಿನ ಹಿರಿಯ ಭಾಗವತ ಕೆ. ಸುರೇಂದ್ರ ಶೆಣೈ ದಂಪತಿಗಳನ್ನು ಪುರಸ್ಕರಿಸುವ ಒಂದು ಆತ್ಮೀಯ ಕಾರ್ಯಕ್ರಮ ಕೆರ್ವಾಶೆ ಮಹಾಲಿಂಗೇಶ್ವರ ದೇವಳದ ಆವರಣದಲ್ಲಿ ನಿನ್ನೆ (19.3.2025) ಜರಗಿತು. ಯು. ವಿಶ್ವನಾಥ ಶೆಣೈ, ಪ್ರಭಾವತಿ ವಿ. ಶೆಣೈ ದಂಪತಿಗಳ ಪ್ರಾಯೋಜಕತ್ವದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಆಯೋಜಿಸಿದ್ಧ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದೇವಳದ ಮೊಕ್ತೇಸರರಾದ ರಮೇಶ ಕಾರ್ಣಿಕ್ ತಂತ್ರಜ್ಞಾನದ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿರುವ ನಮ್ಮ ಕಲೆ, ಸಂಸ್ಕೃತಿಯನ್ನು ರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಉಡುಪಿ ಕಲಾರಂಗದ ಕಾರ್ಯ ಪ್ರಶಂಸಾರ್ಹ ಎಂದು ಹೇಳಿದರು. ಮಹಾವೀರ ಪಾಂಡಿ ಸಮ್ಮಾನಿತರನ್ನು ಪರಿಚಯಿಸಿದರು. ನಿರಂಜನ ಭಟ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು. ನಾರಾಯಣ.ಎಂ. ಹೆಗಡೆ ಪ್ರಶಸ್ತಿ ಪತ್ರ ವಾಚಿಸಿದರು. ಪ್ರಶಸ್ತಿಯು ರೂ.20000 ನಗದುಪುರಸ್ಕಾರ,ಪ್ರಶಸ್ತಿ ಪರಿಕರ ಒಳಗೊಂಡಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಕೋಶಾಧಿಕಾರಿ ಪ್ರೊ.ಕೆ. ಸದಾಶಿವ ರಾವ್ ಸದಸ್ಯರಾದ ಯು. ಎಸ್. ರಾಜಗೋಪಾಲ ಆಚಾರ್ಯ, ಅನಂತರಾಜ ಉಪಾಧ್ಯ, ಪ್ರಶಾಂತ ಕಾಮತ್,ವಿನಾಯಕ ಬಾಳಿಗಾ, ಅರ್ಚಕರಾದ ಪದ್ಮನಾಭ ಭಟ್, ಜಗದೀಶ್ ಭಟ್, ಪಂಚಾಯತ್ ಅಧ್ಯಕ್ಷೆ ಸುನೀತಾ,ಧರ್ಮರಾಜ ಹೆಗ್ಡೆ, ರಾಮರಾಯ ನಾಯಕ್ ಮತ್ತು ಕೆರ್ವಾಶೆಯ ನಾಗರಿಕರು ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.