Header Ads Widget

ವಿವೇಕಾನಂದ ಯೋಗ ಕೇಂದ್ರ ಪುತ್ತೂರು ಇವರಿಂದ ಬೀಚ್ ಸ್ವಚ್ಛತಾ ಕಾರ್ಯಕ್ರಮ

ವಿವೇಕಾನಂದ ಯೋಗ ಕೇಂದ್ರ ಪುತ್ತೂರು ಶಾಖೆಯ ಯೋಗಾರ್ಥಿಗಳು ತಮ್ಮ ಸಮಾಜ ಸೇವಾ ಕಾರ್ಯಕ್ರಮದ ಅಂಗವಾಗಿ ಗುರುಗಳಾದ ಸತೀಶ್ ಕುಂದರ್ ಇವರ ನೇತೃತ್ವದಲ್ಲಿ ಪಡುಕೆರೆ ಬೀಚ್ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಯೋಗ ಗುರುಗಳಾದ ಸತೀಶ್ ಕುಂದರ್ ಅವರು ಮಾತನಾಡುತ್ತಾ ನಾವೆಲ್ಲ ಯೋಗ ಬಂಧುಗಳು ನಮ್ಮ ವೈಯಕ್ತಿಕ ಸ್ವಾಸ್ಥ್ಯ ಸಂರಕ್ಷಣೆಗಾಗಿ ಪ್ರತಿನಿತ್ಯ ಯೋಗ ಮಾಡುವುದರೊಂದಿಗೆ ನಾವು ಜೀವಿಸುವ ಸಮಾಜದ ಸ್ವಾಸ್ಥ್ಯಕ್ಕಾಗಿ ಇಂತಹ ಪರಿಸರ ಸ್ವಚ್ಛತಾ ಕಾರ್ಯಕ್ರಮಗಳನ್ನು ಕನಿಷ್ಠ ತಿಂಗಳಿಗೆ ಒಂದು ದಿನವಾದರೂ ಹಮ್ಮಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಯೋಗ ಶಿಕ್ಷಕಿ ಸುನೀತಾ ಚೈತನ್ಯ, ಯೋಗ ಬಂಧುಗಳಾದ ಲಕ್ಷ್ಮಿ ಟೀಚರ್, ಶಕುಂತಲಾ ಶೆಟ್ಟಿ, ಅನುಪಮಾ, ರಾಜೇಶ್ವರಿ ಭಟ್, ಸುನೀತಾ ಶೆಟ್ಟಿ, ಪ್ರೇಮ,ಕವಿತಾ, ವೇದ ಶೆಟ್ಟಿ, ಶಾಂತ, ವಾಣಿ, ಸುಮಿತ್ರ, ಸುಭದ್ರ, ಶುಭ ಶೆಟ್ಟಿ, ರೂಪ, ಮಮತಾ, ಶ್ವೇತಾ ಶೆಟ್ಟಿ, ಭಾರತಿ, ಸುಜಾತ, ಗುಲಾಬಿ, ವಿಜಯಲಕ್ಷ್ಮಿ ಶೆಟ್ಟಿ, ಮಾಲತಿ ಭರತ್ ರಾಜ್, ನೀತ ಶೆಟ್ಟಿ, ಸಂಧ್ಯಾ ಶೆಟ್ಟಿ, ಮಾಲತಿ ಶೆಟ್ಟಿ, ಸಂಧ್ಯಾ ಶೇಟ್, ಚಿತ್ರಕಲಾ, ಗಾಯತ್ರಿ ಭಟ್, ಶ್ರೀ ಲಕ್ಷ್ಮಿ, ಕುಶಲ ಶೆಟ್ಟಿ, ರಾಜೇಶ್ವರಿ ಶೇಟ್, ಚಂದ್ರಪ್ರತಿಮಾ, ಪ್ರೇರಣಾ, ಯಶವಂತ್, ಮನೀಶ್ ಮುಂತಾದವರು ಉಪಸ್ಥಿತರಿದ್ದರು. ಸುಮಾರು ಒಂದು ಗಂಟೆಗಳ ಕಾಲ ಪಡುಕೆರೆ ಬೀಚ್ ಅನ್ನು ಸ್ವಚ್ಛಗೊಳಿಸಲಾಯಿತು.