Header Ads Widget

ಮಹಿಳಾ ದಿನಾಚರಣೆ :- ಮಹಿಳೆಯರ ಮನೆ, ಮನದ ಹಬ್ಬವಾಗಲಿ

ಜಗತ್ತಿನಾದ್ಯಂತ ಮಹಿಳಾ ದಿನವನ್ನು ಮಾರ್ಚ್‌ 08 ರಂದು ಆಚರಣೆ ಮಾಡಲಾಗುತ್ತದೆ. 

ಜಗತ್ತಿನ ಎಲ್ಲ ದೇಶಗಳು ಸಹ ಅಭಿವೃದ್ಧಿಯ ಪಥದಲ್ಲಿ ತಾವು ಮುಂಚೂಣಿಯಲ್ಲಿರಬೇಕು ಎಂದು ಬಯಸುತ್ತಿರುವ ಈ ಸಂದರ್ಭದಲ್ಲಿ, ತಂತ್ರಜ್ಞಾನ, ಆವಿಷ್ಕಾರಗಳೊಂದಿಗೆ ಅನ್ಯಗ್ರಹದಲ್ಲಿ ವಾಸಿಸಲು ಯೋಗ್ಯ ಸ್ಥಳವನ್ನು ಹುಡುಕುತ್ತಿರುವ ಪ್ರಯತ್ನಗಳ ಸಂದರ್ಭದಲ್ಲಿ ಇಂದು ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಅವರಿಗೆ ಮೀಸಲಿರಿಸಲಾಗಿದೆ. ಹಾಗೂ ಅವರ ಕೊಡುಗೆಯನ್ನು ನೆನೆಯುತ್ತಾ ಮಹಿಳಾ ದಿನಾಚರಣೆಯನ್ನು ಆಚರಿಸುವ ಮೂಲಕ ಅವರಿಗೆ ಗೌರವಿಸುವ ಕಾಯ೯ ಮಾಡಲಾಗುತ್ತದೆ.


ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆಯ ಇತಿಹಾಸ: 

ಮಹಿಳಾ ದಿನಾಚರಣೆಯನ್ನು ಕಳೆದ ಒಂದು ಶತಕದಿಂದಲೂ ಸಂಭ್ರಮಿಸಲಾಗುತ್ತಿದೆ. 1911 ರಲ್ಲಿ ಡೆನ್ಮಾರ್ಕ್‌, ಆಸ್ಟ್ರೀಯ, ಜಮರ್ನಿ, ಸ್ವಜರ್‌ಲ್ಯಾಂಡ್ ದೇಶಗಳಲ್ಲಿ ಲಕ್ಷಾಂತರ ಜನರು ಒಂದು ಕಡೆ ಸೇರುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲು ಆರಂಭಿಸಿದರು. ನಂತರ ಅಮೆರಿಕ, ಬ್ರಿಟನ್‌ಗಳು ಸೇರಿದಂತೆ ಹಲವು ದೇಶಗಳಲ್ಲಿನ ಸಮಾಜವಾದಿ ಪಕ್ಷಗಳು ಹೆಚ್ಚು ಪ್ರಚಾರ ಮಾಡುವ ಮೂಲಕ ಇಂದು ಬಹು ಸಂಖ್ಯಾತ ದೇಶಗಳಲ್ಲಿ ವಿಶೇಷ ದಿನವಾಗಿ ಆಚರಣೆ ಮಾಡಲಾಗುತ್ತದೆ.

ಅಂತರಾಷ್ಟ್ರೀಯ ಮಹಿಳೆಯರ ದಿನ'ವನ್ನು ಪ್ರಥಮ ಬಾರಿಗೆ ಕೂಲಿ ಚಳುವಳಿಯ ಮೂಲಕ (Labour Movement) ಉತ್ತರ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಪ್ರಾರಂಭಿಸಲಾಯಿತು. ಮಹಿಳಾ ದಿನಾಚರಣೆ ಮೂಲಕ ಲಿಂಗ ಸಮಾನತೆ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಬಲವಾಗಿ ಸಾರಲು ಈ ದಿನ ಒಂದು ದೊಡ್ಡ ವೇದಿಕೆ ಆಗಿರುತ್ತದೆ. ಅಲ್ಲದೇ ದೇಶಕ್ಕೆ, ಪ್ರಪಂಚಕ್ಕೆ ಮಹಿಳಾ ಸಾಧಕರ ಕೊಡುಗೆಗಳನ್ನು ನೆನೆದು ಸಾರುವ ದಿನವಿದು

ಸಮಾನತೆ ಎಲ್ಲಿದೆಯೋ ಅಲ್ಲಿ ಎಲ್ಲರೂ ಎಲ್ಲ ಪಾತ್ರವನ್ನು ಲಿಂಗ ಅಸಮಾನತೆ ತೋರದೆ ನಿರ್ವಹಿಸಬಲ್ಲರು.ಎಲ್ಲರೂ ಎಲ್ಲರೊಂದಿಗೂ ಸಭ್ಯತೆಯಿಂದ ವರ್ತಿಸುವ, ವಕಾಲತ್ತು ವಹಿಸುವ, ಸಹಕಾರ ಮನೋಭಾವನೆ ಇಟ್ಟುಕೊಳ್ಳುವ ಅಗತ್ಯ ನಮ್ಮ ಮುಂದಿದೆ.

ಲಿಂಗ ಸಮಾನತೆ ಎಂಬುದು ಮಹಿಳೆಯರ ಸಮಸ್ಯೆ ಅಲ್ಲ, ಅದು ಆರ್ಥಿಕ ಸಮಸ್ಯೆ ಆಗಿದೆ.

ಸಾಧನೆಗೆ ಸಂಬಂಧಿಸಿದಂತೆ 'ಸಾಹಿತ್ಯ, ರಕ್ಷಣೆ, ಶಿಕ್ಷಣ, ಸಿನಿಮಾ ನಿರ್ದೇಶಕಿಯರು, ಸಮಾನ ವೇತನ ಪಡೆಯುತ್ತಿರುವುದು, ವಿಜ್ಞಾನ ಕ್ಷೇತ್ರದ ಸಾಧನೆ ಮತ್ತು ಪ್ರಶಸ್ತಿಗಳು, ಸರ್ಕಾರಿ ವಲಯಗಳಲ್ಲಿ ಮೇಲಾಧಿಕಾರಿಗಳಾಗಿರುವವರು, ಪೊಲೀಸ್ ಇಲಾಖೆ', ಹೀಗೆ ಹಲವು ಸಾಧಕರನ್ನು ಸಾಧನೆಯಲ್ಲಿ ಸಮಾನತೆ ತೋರಿಸಲು ಹೇಳಬಹುದು.


ರಾಜಕೀಯದಲ್ಲಿ ಅವರಿಗೆ ಅವಕಾಶಗಳನ್ನು ನೀಡಬೇಕು:

ಒಂದು ಕುಟುಂಬದ ಸಲುಹುವ ಸಾಮರ್ಥ್ಯ ಗಂಡಿಗಿಂತ ಹೆಚ್ಚಿನದಾಗಿ ಇರುವುದೇ ಮಹಿಳೆಗೆ. ಹೆಣ್ಣು ಸಂಸಾರದ ಒಂದು ಕಣ್ಣು.

ಪ್ರಪಂಚದಾದ್ಯಂತ ಇನ್ನೂ ಪ್ರಗತಿಪರ ಮನಸ್ಸುಗಳು ಹೆಚ್ಚಬೇಕಿದೆ ಮತ್ತು ಅಂತರ್ಗತ ನಡವಳಿಕೆಗಳನ್ನು ಪ್ರಗತಿಗಾಗಿಪಾಲನಮಾಡಬೇಕಿದೆ.

ಪುರುಷರು ಸಾಧನೆ ಮಾಡಿದ ಹಲವು ಕ್ಷೇತ್ರಗಳಲ್ಲಿ ಇಂದು ಮಹಿಳೆಯರು ಸಾಧನೆ ಮಾಡಿರುವುದು ಅಭಿನಂದನೀಯ.

ಇಂದಿನ ಈ ಪರಿಸ್ಥಿತಿಯಲ್ಲಿ ಮಹಿಳೆಯರು ಮುಂದುವರಿದರೂ ಕೂಡ ಅವರಲ್ಲಿ ನಡೆಯುತ್ತಿರುವ ದೌರ್ಜನ್ಯ ಕೆಲಸದಲ್ಲಿ ನಡೆಯುವ ಲಿಂಗ ತಾರತಮ್ಯ ಮುಂತಾದ ವಿಚಾರಗಳನ್ನು ಸರ್ಕಾರ ಮನಗಂಡು ಹಲವಾರು ಕಾನೂನುಗಳನ್ನು ಮಾಡಿದೆಯಾದರೂ ಅದರ ಪಾಲನೆ ಸರಿಯಾಗಿ ನಡೆಯುತ್ತಿಲ್ಲ ಹೀಗಾಗಿ ಈ ಬಗ್ಗೆ ಎಲ್ಲರೂ ಕೂಡ ಈ ಮಹಿಳಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕಾಗಿದೆ.

ಕೇವಲ ವರ್ಷದಲ್ಲಿ ಒಮ್ಮೆ ಮಹಿಳೆಯನ್ನು ಗೌರವಿಸಿದರೆ ಸಾಲದು ಬದಲಾಗಿ ಅವರನ್ನು ಪ್ರತಿದಿನ ಕೂಡ ಗೌರವಿಸುವ ಕೆಲಸವಾಗಬೇಕು ಇಂದು ನಮ್ಮ ದೇಶದಲ್ಲಿ ಹಲವಾರು ರಾಜ್ಯವನ್ನು ಆಡಳಿತ ನಡೆಸುವ ಅವಕಾಶ ಮಹಿಳೆಯರಿಗೆ ಸಿಕ್ಕಿದೆ ಇದು ನಿಜವಾದ ಮಹಿಳಾ ಸ್ವಾತಂತ್ರ್ಯ ಏನೇ ಆಗಲಿ ಮಹಿಳಾ ದಿನ ಮಹಿಳೆಯರಿಗೆ ಮತ್ತಷ್ಟು ಅಧಿಕಾರ ಗೌರವ ನೀಡುವ ದಿನವಾಗಲಿ ಎಂಬುದು ನಮ್ಮ ಹಾರೈಕೆ.

'ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮಿ, ಶಕ್ತಿಗೆ ಪಾರ್ವತಿ, ಎಲ್ಲಕ್ಕೂ ಮಿಗಿಲಾಗಿ ಜನ್ಮ ಕೊಟ್ಟವಳು ಹೆಣ್ಣು, ಇಂತಹ ಲೋಕಮಾತೆಗೆ ಕೋಟಿ ನಮನಗಳು - ಮಹಿಳಾ ದಿನದ ಶುಭಾಶಯಗಳು'.

✍🏼ರಾಘವೇಂದ್ರ ಪ್ರಭು ಕವಾ೯ಲು