Header Ads Widget

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಈಶ್ವರ್ ಮಲ್ಪೆ ಅವರಿಗೆ ಸನ್ಮಾನ

ಉಡುಪಿಯ ಪ್ರಸಿದ್ಧ ಸಮಾಜ ಸೇವಕ, ನುರಿತ ಮುಳುಗು ತಜ್ಞ ಶ್ರೀ ಈಶ್ವರ್ ಮಲ್ಪೆ ಅವರನ್ನು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಚೈತನ್ಯ ಎಂ.ಜಿ. ಯವರು ಈಶ್ವರ್ ಮಲ್ಪೆಯವರ ಸಾಧನೆ, ಸನ್ಮಾನಗಳ ವಿವರವನ್ನೊಳಗೊಂಡ ಅಭಿನಂದನಾ ಪತ್ರ ವಾಚಿಸಿದರು. ಅಧ್ಯಕ್ಷ ಚಂದ್ರಕಾಂತ ಕೆ.ಎನ್. ಶಾಲು ಹೊದಿಸಿ ಸನ್ಮಾನಿಸಿದರು. ಪೂರ್ವಾದ್ಯಕ್ಷ ಶಶಿಧರ್ ಭಟ್ ಅವರು ಪರಿಷತ್ ಕೊಡಮಾಡಿದ ಮೊಬಲಗನ್ನು ಹಸ್ತಾಂತರಿಸಿದರು.  ಸನ್ಮಾನ ಸ್ವೀಕರಿಸಿದ ಈಶ್ವರ್ ಮಲ್ಪೆಯವರು ಮಾತನಾಡಿ ಎಲ್ಲರ ಶುಭ ಹಾರೈಕೆ, ಬೆಂಬಲ ಪ್ರೋತ್ಸಾಹ ಹಾಗೂ ದೇವರ ದಯೆಯಿಂದ ತಮಗೆ ಇಂತಹ ಪುಣ್ಯಕಾರ್ಯ ಮಾಡಲು ಶಕ್ತಿ ಬಂದಿದೆ ಮತ್ತು ಇಂತಹ ಸಮಾಜ ಸೇವಾ ಕಾರ್ಯವನ್ನು ಮುಂದೆಯೂ ಮುನ್ನಡೆಸಿಕೊಂಡು ಹೋಗುವ ಅಭಿಲಾಷೆ ಇದೆ ಎಂದು ಅಭಿಪ್ರಾಯಪಟ್ಟರು.ಪೂರ್ವಾದ್ಯಕ್ಷರಾದ ವಿಷ್ಣು ಪಾಡಿಗಾರ್, ಎಂ.ಎಸ್. ವಿಷ್ಣು, ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ಉಪಸ್ಥಿತರಿದ್ದರು.