ಉಡುಪಿ, ಮಾರ್ಚ್ 28: ನನ್ನ ಮಗಳನ್ನು ಓರ್ವ ಮುಸ್ಲಿಂ ಯುವಕ ಅಪಹರಿಸಿ, ವಿವಾಹವಾಗಲು ಮುಂದಾಗಿದ್ದಾನೆ ಎಂದು ಯುವತಿ ತಂದೆ ಆರೋಪಿಸಿದ್ದಾರೆ. ಯುವತಿಯ ತಂದೆ ಗಾಡ್ವಿನ್ ದೇವದಾಸ್ ಅವರು ಇದು ಲವ್ ಜಿಹಾದ್ ಷಡ್ಯಂತ್ರ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಮೊಹಮ್ಮದ್ ಅಕ್ರಮ್ ಈ ಹಿಂದೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪವೂ ಇದೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಯುವತಿ ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದು, ಕಾಲೇಜಿನಿಂದ ವಾಪಸು ಮನೆಗೆ ತೆರಳುವಾಗ ಅಪಹರಿಸಲಾಗಿದೆ ಎನ್ನಲಾಗಿದೆ. ಗಾಡ್ವಿನ್ ದೇವದಾಸ್ ಈ ಹಿಂದೆ ಅಕ್ರಮ್ ಮೊಹಮ್ಮದ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಈ ಸೇಡು ತೀರಿಸಿ ಕೊಳ್ಳಲು ಅಕ್ರಮ್ ಮೊಹಮ್ಮದ್ ನನ್ನ ಮಗಳನ್ನು ಅಪಹರಿಸಿ, ಬೆದರಿಸಿ ವಿವಾಹ ನೊಂದಣಿಗೆ ಸಹಿ ಹಾಕಿಸಿದ್ದಾನೆ ಎಂದು ದಾಖಲಿಸಿದ್ದಾರೆ.
ಅಪ್ರಾಪ್ತೆಯಾಗಿದ್ದಾಗಲೇ ನಮ್ಮ ಮಗಳಿಗೆ ಅಕ್ರಂ ಕಿರುಕುಳ ನೀಡಿದ್ದನು. ಐದು ವರ್ಷದ ಹಿಂದೆ ಪೋಕ್ಸೋ ಕೇಸು ದಾಖಲು ಮಾಡಿದ್ದೇವೆ. ಲೈಂಗಿಕ ಕಿರುಕುಳ ನೀಡಿಲ್ಲ ಎಂಬ ಕಾರಣಕ್ಕೆ ಕೇಸು ವಜಾ ಗೊಂಡಿತ್ತು. ಇದೀಗ, ಸೇಡು ತೀರಿಸಲು ಅಪಹರಿಸಿದ್ದಾನೆ” ಎಂದು ಪೋಷಕರಾದ ಮೇರುಸ್ ಪುಷ್ಪಲತಾ ಮತ್ತು ಗಾಡ್ವಿನ್ ದೇವದಾಸ್ ಆರೋಪಿಸಿದ್ದಾರೆ.