Header Ads Widget

ಜಿಲ್ಲೆಯಲ್ಲಿ ವ್ಯಾಪಕ ಉದ್ಯೋಗವಕಾಶಗಳನ್ನು ಸೃಷ್ಟಿಸುವ ಮಹತ್ವಕಾಂಕ್ಷಿಉದ್ಯೋಗ ಮೇಳ ~ಪ್ರಭಾಕರ್ ಪೂಜಾರಿ

ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಾ ಇದ್ದು ಪ್ರತಿ ವರ್ಷ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಗಿಸಿ ಉನ್ನತ ಹುದ್ದೆಗಳ ಆಕಾಂಕ್ಷೆಯೊಂದಿಗೆ ದೇಶ ವಿದೇಶಗಳಿಗೆ ತೆರಳುತ್ತಿದ್ದಾರೆ. ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ  ಹಾಗೂ ಅಂತಹ ಅಭ್ಯರ್ಥಿಗಳನ್ನು ಜಿಲ್ಲೆಯಲ್ಲಿಯೇ  ಉಳಿಸಿಕೊಳ್ಳುವ  ಮಹತ್ವಕಾಂಕ್ಷೆಯೊಂದಿಗೆ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಉಡುಪಿ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿಯವರು ಹೇಳಿದರು. 


ಅವರು ಮಂಗಳವಾರ ಉಡುಪಿ ಬನ್ನಂಜೆ ನಾರಾಯಣ ಗುರು ಸಭಾಂಗಣದಲ್ಲಿ ಉಡುಪಿ ನಗರಸಭೆ, ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ ಬಿಲ್ಲಾಡಿ ಇವರ ಪ್ರಾಯೋಜಕತ್ವದಲ್ಲಿ ಮತ್ತು ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್,  ಬಿಲ್ಲವ ಸೇವಾ ಸಂಘ ಬನ್ನಂಜೆ ಇವರ ಸಹಕಾರದಲ್ಲಿ ಉನ್ನತಿ(2.0)- 2025 ಎನ್ನುವ ಪರಿಕಲ್ಪನೆಯಲ್ಲಿ ಆಯೋಜಿಸಿದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿ ಮಾತನಾಡುತ್ತಿದ್ದರು.


 ಉದ್ಯೋಗ ಮೇಳದಲ್ಲಿ ಸುಮಾರು 60 ಕಂಪನಿಗಳು ಹಾಗೂ  ಎರಡು ಸಾವಿರಕ್ಕೂ ಮಿಕ್ಕಿ ಉದ್ಯೋಗ ಕಾಂಕ್ಷಿಗಳು  ಭಾಗವಹಿಸಿ, 70% ಅಭ್ಯರ್ಥಿಗಳು ವಿವಿಧ ಕಂಪನಿಗಳಿಗೆ ನಿಯುಕ್ತಿ ಹೊಂದಿದರು.


ಆತ್ಮಾನಂದ ಸಂಸ್ಥೆಯ ಪ್ರಾಚಾರ್ಯರಾದ  ರೂಪೇಶ್ ಕುಮಾರ್  ಪ್ರಾಸ್ತಾವಿಕವಾಗಿ ಮಾತನಾಡಿದರು.  ನಗರಸಭೆಯ ಉಪಾಧ್ಯಕ್ಷರಾದ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸುಂದರ್ ಜಿ ಕಲ್ಮಾಡಿ, ಮಾಜಿ ಅಧ್ಯಕ್ಷರಾದ ಕಿರಣ್ ಕುಮಾರ್, ಸ್ಥಳೀಯ ನಗರಸಭಾ ಸದಸ್ಯೆ ಸವಿತಾ ಹರೀಶರಾಮ್, ಮೇಳದ ಸಂಯೋಜಕರುಗಳಾದ ಓಬ ಪೂಜಾರಿ, ವಿಜಯ ಕೊಡವೂರು,  ಪ್ರಮೋದ್ ಕರ್ಕೇರಾ, ನಿವೃತ್ತ ಪ್ರಾಂಶುಪಾಲ  ಡಾ.ಗಣನಾಥ ಎಕ್ಕಾರು,  ಭಾಸ್ಕರ್ ಸುವರ್ಣ, ಉಡುಪಿಯ ಉದ್ಯಮಿ ದಿನೇಶ್ ಅಮೀನ್, ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಮಾಧವ ಬನ್ನಂಜೆ, ನಗರಸಭೆಯ ಅಧಿಕಾರಿಗಳಾದ  ನಾರಾಯಣ್ ಎಸ್ ಎಸ್,  ಮನೋಹರ್,  ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.