ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನ ಕಾರ್ಯಕ್ರಮವು ಗೋವರ್ಧನ ಗೋಶಾಲೆ ನೀಲಾವರದಲ್ಲಿನಡೆಯಿತು. ಗಾಂಧೀಜಿ ಚಿಂತನೆಯ ಸತ್ಯ, ಅಹಿಂಸೆ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸೇವೆಯು ರಾಷ್ಟ್ರೀಯ ಸೇವಾ ಯೋಜನೆಯ ತತ್ವಗಳು. ಈ ಕಾರಣದಿಂದಲೆ 1969 ರಲ್ಲಿ ಗಾಂಧೀಜಿಯವರ ಶತಮಾನೋತ್ಸವ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಅನುಷ್ಠಾನ ಮಾಡಲಾಯಿತು.
ಸ್ವಯಂ ಸೇವಕರು ಈ ತತ್ವಗಳನ್ನು ಅರ್ಥಮಾಡಿಕೊಂಡಾಗ ಮಾತ್ರ ನಿಜವಾದ ಸ್ವಯಂ ಸೇವಕರಾಗಲು ಸಾಧ್ಯ ಎಂದು ವಾರ್ಷಿಕ ಶಿಬಿರದ ಉದ್ಘಾಟಕಾರದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಕಾರ್ಯದರ್ಶಿಗಳಾದ ಶ್ರೀ ಬಿ.ಪಿ . ವರದರಾಯ್ ಪೈ ಇವರು ಹೇಳಿದರು. ಮಹಾತ್ಮಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ।.ದೇವಿದಾಸ್ ಎಸ್.ನಾಯಕ್ ಇವರು ಅಧ್ಯಕ್ಷತೆ ವಹಿಸಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಹಾಗೂ ಸ್ವಯಂ ಸೇವಕರ ಕರ್ತವ್ಯದ ಕುರಿತು ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡಿದರು .
ಮುಖ್ಯ ಅತಿಥಿಗಳಾಗಿ ಪ್ರೊ।ನಿಕೇತನ,ಪ್ರಾಧ್ಯಾಪಕರು ಮತ್ತು ಕನ್ನಡ ವಿಭಾಗ ಮುಖ್ಯಸ್ಥರು ,ಡಾ।. ಜಿ.ಶಂಕರ್ ಮಹಿಳಾ ಸಕಾರಿ ಪ್ರಥಮ ದರ್ಜೆ ಕಾಲೇಜು ಉಡುಪಿ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ ,ಡಾ।.ಮಲ್ಲಿಕಾ ಎ ಶೆಟ್ಟಿ ಉಪನ್ಯಾಸ ಕರು , ಎಂಜಿಎಂ ಕಾಲೇಜು,, ಗೀತಾ ಬಾಳಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶ್ರೀಮತಿ ಕೆ ಬೇಬಿ ಪಂಚಾಯತ್ ಅಧ್ಯಕ್ಷರು, ಎನ್ ಎಸ್ ಎಸ್ ನ ಯೋಜನಾಧಿಕಾರಿಗಳಾದ ಸನತ್ ಕೋಟ್ಯಾನ್ ಮತ್ತು ದೀಪಿಕಾ ಇವರು ಉಪಸ್ಥಿತರಿದ್ದರು.ಪ್ರಜ್ಞಾ ಸ್ವಾಗತಿಸಿ ಪುಣ್ಯ ವಂದಿಸಿ ದಿಶಾ ನಿರೂಪಿಸಿದರು.