Header Ads Widget

ಕಲ್ಲ್ಯಾಣ್ಪುರ: ಕ್ರೈಸ್ತ ಧರ್ಮೋಪದೇಶ ದಿನ

 

ಕಲ್ಲ್ಯಾಣ್ಪುರ: ಕ್ರೈಸ್ತ  ಧರ್ಮೋಪದೇಶ ದಿನವನ್ನು ಮಿಲಾಗ್ರಿಸ್ ಪ್ರಧಾನಾಲಯದಲ್ಲಿ  ಭಾನುವಾರದಂದು ಆಚರಿಸಲಾಯಿತು. ಮೊನ್ಸಿಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಫಾ| ಪ್ರದೀಪ್ ಕಾರ್ಡೋಜಾ ಹಾಗೂ ಫಾ| ಜೆನ್ಸಿಲ್ ಆಳ್ವಾ  ಇವರುಗಳು ಉಪ ಸ್ಥಿತರಿದ್ದರು. ಕ್ರಿಸ್ತರ ಬಾಳನು ಅನುಸರಿಸಿ, ಕ್ರೈಸ್ತರ ಶಿಷ್ಯರಾಗಲು ಗುರುಗಳು ಕರೆ ನೀಡಿದರು.


 ದಿವ್ಯ ಬಲಿಪೂಜೆಯಲ್ಲಿ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು  ಹಾಗೂ ಪೋಷಕರು ಸಂತೋಷವನ್ನು ವ್ಯಕ್ತಪಡಿಸಿದರು‌. ಶ್ರೀಮತಿ ಶೀಲಾ ಅಂದ್ರಾದೆ ಆಯೋಗದ ಸಚೇತಕರು ಸರ್ವ ಮಕ್ಕಳನ್ನು ಶ್ಲಾಘಿಸಿ ಅಭಿನಂದಿಸಿದರು ಹಾಗೂ ವಾರ್ಷಿಕ ವರದಿಯನ್ನು ವಾಚಿಸಿದರು. ಶ್ರೀಮತಿ ಪ್ರೇಮ ಲುವಿಸ್ ಕಾರ್ಯನಿರ್ವಾಹಣೆ ಮಾಡಿದರು. 


ನೆರೆದ ಸರ್ವ ಮಕ್ಕಳಿಗೆ ಬಹುಮಾನ ವಿತರಿಸಿ ಮಕ್ಕಳನ್ನು ಉತ್ತೇಜಿಸಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸ ಲಾಯಿತು.