Header Ads Widget

ಸವಿನೆನಪುಗಳು ಬೇಕು ಸವಿಯಲು ಬದುಕು-ಹರೀಶ್ ಸುವರ್ಣ


ಯು.ಪಿ.ಎಂ.ಸಿ- ಎನ್.ಎಸ್ . ಎಸ್ ಶಿಬಿರ ಸಮಾರೋಪ


ವಿದ್ಯೆಯೊಂದಿಗೆ ವಿನಯ, ವೃತ್ತಿಗೆ ಗೌರವ, ಕಲಿತ ವಿದ್ಯೆ ಬಳಸುವಿಕೆ, ಪರರಿಗೆ ಸಹಕಾರ, ವಿಚಾರ ಗಳನ್ನು ಸಂಗ್ರಹಿಸಿ ಬರೆದಿಟ್ಟುಕೊಳ್ಳುವ ಕಲೆ, ಇವೆಲ್ಲವೂ ಎನ್‌.ಎಸ್.ಎಸ್ ನಲ್ಲಿ ತೊಡಗಿಸಿಕೊಳ್ಳುವುದರಿಂದ ಮಾತ್ರ ಲಭಿಸುವುದು, ಹಾಗೆಯೇ ನಿವೃತ್ತಿಯ ನಂತರವೂ ಸದಾ ನೆನಪಿನಲ್ಲಿ ಇರುವುದು ಎನ್. ಎಸ್. ಎಸ್ ಅನುಭವ ಅದಕ್ಕಾಗಿ ಸವಿ ನೆನಪುಗಳು ಬೇಕು ಸವಿಯಲು ಬದುಕು ಎಂದು ಶ್ರೀ ರಾಮಕೃಷ್ಣ ಭಜನಾ ಮಂದಿರ ಕುತ್ಪಾಡಿ ಇದರ ಮಾಜಿ ಅಧ್ಯಕ್ಷರಾದ ಶ್ರೀ ಹರೀಶ್ ಸುವರ್ಣ ರವರು ಹೇಳಿದರು.


ಅವರು ಮಾರ್ಚ್ 28ರಂದು ಕುತ್ಪಾಡಿ ಶ್ರೀ ರಾಮಕೃಷ್ಣ ಭಜನಾ ಮಂದಿರ ಹಾಗು ಸತ್ಯಯುಗ ಯೋಗಾ ಶ್ರಮ ಇಲ್ಲಿ ನಡೆದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.


ಸತ್ಯಯುಗ ಯೋಗಾಶ್ರಮದ ಅಧ್ಯಕ್ಷರಾದ ಶ್ರೀ ವಾಮನ ಬಂಗೇರ, ಗ್ರಾಮ ಪಂಚಾಯತ್ ಕಡೆಕಾರು ಇದರ ಉಪಾಧ್ಯಕ್ಷರಾದ ಶ್ರೀ ನವೀನ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಶ್ರೀ ರಘುನಾಥ್ ಕೋಟ್ಯಾನ್, ಲಯನ್ಸ್ ಕ್ಲಬ್ ಉಡುಪಿ ಇದರ ಸ್ಥಳೀಯ ಮುಖ್ಯಸ್ಥೆ ಶ್ರೀಮತಿ ವಿನೋದ ನಾರಾಯಣ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.


ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು, ಕಾಲೇಜಿನ ಪ್ರಾಚಾರ್ಯರು ಅಭಿನಂದನಾ ಪತ್ರವನ್ನು ವಿತರಿಸಿದರು. ಅತ್ಯುತ್ತಮ ತಂಡ ಪ್ರಶಸ್ತಿ ಸಿಂಧು ತಂಡ ಭಾಜನವಾಗಿ ಶ್ರೀ ವಾಮನ ಬಂಗೇರ ಅಭಿನಂದಿಸಿದರು.


ಎನ್.ಎಸ್.ಎಸ್ ಸಹ ಯೋಜನಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿದರು, ಯೋಜನಾಧಿಕಾರಿ ರಾಜೇಶ್ ಕುಮಾರ್ ಧನ್ಯವಾದ ವಿತ್ತರು. ಕನ್ನಡ ಉಪನ್ಯಾಸಕ ಶಶಿಕಾಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.