ಕಟಪಾಡಿ, - ಫಾರ್ಮ ಫ್ರೆಂಡ್ಸ್ ಉಡುಪಿ ಇದರ ಆಶ್ರಯದಲ್ಲಿ ವೈದ್ಯಕೀಯ ಪ್ರತಿನಿಧಿ ಬೀಟಾ ಸಿಕೆಲ್ ತಲಸೆಮಿಯ ಕಾಯಿಲೆಯಿಂದ ಬಳಲುತ್ತಿರುವ ಗೀತಾ ರವರ ಚಿಕಿತ್ಸಾ ವೆಚ್ಚದ ಸಹಾಯಾರ್ಥಕವಾಗಿ ನಾಕೌಟ್ ಕ್ರಿಕೆಟ್ ಪಂದ್ಯಾಟ ಎಸ್ ವಿ ಎಸ್ ಕ್ರೀಡಾಂಗಣ ಕಟ್ಪಾಡಿಯಲ್ಲಿ ಮಾ.2ರಂದು ಆದಿತ್ಯವಾರ ನಡೆಯಿತು,
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಪು ಶಾಸಕ ಸುರೇಶ್ ಶೆಟ್ಟಿ ಗುಮೆ೯, ಮಾತನಾಡಿ ತಲೆಸಿಮಿಯ ಕಾಯಿಲೆ ಆಯುಷ್ಮಾನ್ ಭಾರತ ಯೋಜನೆಯಡಿ ಚಿಕಿತ್ಸೆಗೆ ಲಭ್ಯವಾಗುವಂತೆ ಕೇಂದ್ರ ಮತ್ತು ರಾಜ್ಯದ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು.
ಮಾನವೀಯತೆ ಈ ಪ್ರಪಂಚದ ಅತಿ ದೊಡ್ಡ ವ್ಯವಸ್ಥೆ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿದಾಗ ಭಗವಂತನ ಸೇವೆ ಮಾಡಿದಂತೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾರ್ಮ ಫ್ರೆಂಡ್ಸ್ ಉಡುಪಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ವೃದ್ಧಿ ಫಾರ್ಮದ ರಾಧಾಕೃಷ್ಣ ಕೆ.ಜಿ, ವೈದ್ಯಕೀಯ ಪ್ರತಿನಿಧಿ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಸತೀಶ ಹೆಗ್ಡೆ, ಕಾರ್ಯದರ್ಶಿ ಪ್ರಸನ್ನ ಕಾರಂತ್, ರಂಜಿತ್ ಕುಮಾರ್, ಚಂದ್ರ ಶೇಖರ್ ಆಚಾರ್ಯ, ದೇವೇಂದ್ರ ಶ್ರೀಯಾನ್ ,ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗೀತಾ ರವರ ತಾಯಿ ಶೀಲವ್ವ ಅವರಿಗೆ 10.69 ಲಕ್ಷ ರೂ ಚೆಕ್ ಹಸ್ತಾಂತರಿಸ ಲಾಯಿತು. ಈ ಸಂದರ್ಭದಲ್ಲಿ ದೇಣಿಗೆ ಸಂಗ್ರಹಿಸುವಲ್ಲಿ ನೆರವಾದ ಶಶಿರಾಜ್ ತಲ್ಲೂರು, ಗೀತಪ್ರಿಯ ಕೋಟ, ರಶ್ಮಿ, ಕನಸು ಮ್ಯೂಸಿಕಲ್ ಹಾಗೂ ಮಾನವೀಯತೆ ಮೆರೆಯೋಣ ತಂಡವನ್ನು ಗುರುತಿಸಿ ಗೌರವಿಸಲಾಯಿತು.
ಕ್ರಿಕೆಟ್ ಪಂದ್ಯಾಟದಲ್ಲಿ ವಿನ್ನರಾಗಿ ಮೂಡಿಬಂದ ಜೈ ಮಾರುತಿ ಫ್ರೆಂಡ್ಸ್ ಮಂಗಳೂರು ಮತ್ತು ರನ್ನರ್ ಆಗಿ ಮೂಡಿಬಂದ ಯುನೈಟೆಡ್ ಬ್ರಹ್ಮಾವರ ತಂಡಕ್ಕೆ ನಗದು ಸಹಿತ ಪ್ರಶಸ್ತಿ ನೀಡಲಾಯಿತು. ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ನಾಗಿ ಜೈ ಮಾರುತಿ ತಂಡದ ಕಶ್ಯಪ್ ,ಉತ್ತಮ ದಾಂಡಿಗನಾಗಿ ಯುನೈಟೆಡ್ ಬ್ರಹ್ಮಾವರದ ವಿಕ್ರಂ, ಉತ್ತಮ ಬೌಲರ್ ಆಗಿ ರೋಹಿತ್ ,ಅದೇ ರೀತಿ ಸರಣಿ ಶ್ರೇಷ್ಠರಾಗಿ ಅಕ್ಷಯ್ ಮೂಡಿಬಂದರು' ಈ ಸಂದರ್ಭದಲ್ಲಿ ಸಹಾಯಾರ್ಥಕವಾಗಿ ನಡೆಸಿದ ಲಕ್ಕಿ ಕೂಪನ್ ಡ್ರಾ ನಡೆಸಲಾಯಿತು.
ಫಲಿತಾಂಶದ ವಿವರ ಇಂತಿದೆ. ಸಮಾಧಾನಕರ 5 ಬಹುಮಾನ
1- 9985,
2- 9184
3- 0959
4- 1647
5- 4176
ಮೊದಲ ವಿಜೇತ ನಂ.91581 , 2 ನೇ ವಿಜೇತರು - 9439 ಮತ್ತು 3ನೇ ವಿಜೇತ ಸಂಖ್ಯೆ 1048 ಆಗಿರುತ್ತದೆ.
ಕಾಯ೯ಕ್ರಮದಲ್ಲಿ ಸಹಕರಿಸಿದ ಎಲ್ಲರನ್ನೂ ಗುರುತಿಸಲಾಯಿತು.
ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿ, ವಂದಿಸಿದರು.