ಮಾಜಿ ಸಚಿವರು, ಮಾಜಿ ಸಂಸದರು ಆದ ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಕೊರಗ ಸಮುದಾಯದ ಮುಖಂಡರ ನಿಯೋಗದವರು ಇಂದು ಕರ್ನಾಟಕ ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿಪತ್ರ ನೀಡಿದರು.
ರಾಜ್ಯದ ಕೊರಗ ಸಮುದಾಯದ ಬಂಧುಗಳ ಜೊತೆ ನಾನಿದ್ದೇನೆ. ಇಂದಿಗೂ ಮುಖ್ಯವಾಹಿನಿಯಿಂದ ಹೊರಗುಳಿದಿರುವ, ಕಡುಕಷ್ಟದಲ್ಲೇ ಬದುಕು ಸಾಗಿಸುತ್ತಿರುವ ಕೊರಗ ಸಮುದಾಯದ ಅಹವಾಲುಗಳನ್ನು ಪರಿಹರಿಸುವ ಬಗ್ಗೆ ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಶ್ರಮಿಸಲಿದೆ.
- ಜಯಪ್ರಕಾಶ್ ಹೆಗ್ಡೆ