Header Ads Widget

ಉಡುಪಿ ನಗರಸಭೆ ಮಹಾನಗರ ಪಾಲಿಕೆಯಾಗಿ ನಿರ್ಣಯ ಕೈಗೊಳ್ಳುವ ಮೊದಲು ಯೋಚಿಸಬೇಕಾದ ವಿಷಯ

ಸುಮಾರು ಮೂವತ್ತು ವರುಷಗಳ ಹಿಂದೆ ಉಡುಪಿಯ ಸುತ್ತಮುತ್ತಲಿನ ಪ್ರದೇಶಗಳನ್ನು ಸೇರಿಸಿ ನಗರ ಸಭೆಯಾಯಿತು. ಅಂದು ನಗರಸಬೆಗೆ ಸೇರ್ಪಡೆಯಾಗುವ ಪ್ರದೇಶಗಳಲ್ಲಿ ಶಿವಳ್ಳಿ ಗ್ರಾಮದ ಮಣಿಪಾಲ ಪ್ರದೇಶವೂಸೇರಿರುತ್ತದೆ. ಅಂದು ಮಣಿಪಾಲಕ್ಕೆ ಒಳಚರಂಡಿ ( ಡ್ರೈನೇಜ್ ) ಯೋಜನೆಯ ಭರವಸೆ ಯನ್ನು ಕೊಡಲಾಗಿತ್ತೆ. ಇದೀಗ ಮೂವತ್ತು ವರುಷ ಕಳೆದರೂ ಎಲ್ಲಾ ಪಕ್ಷದ ಸರಕಾರ ಆಡಳಿತ ಬಂದರೂ ಅಂತರಾಷ್ಟ್ರೀಯ ನಗರ ಎಂದು ಕರೆಯುವ ಮಣಿಪಾಲಕ್ಕೆ ಸೂಕ್ತವಾದ ರಸ್ತೆಗಳಿಗೆ ಮಳೆನೀರು ಹೋಗುವ ಚರಂಡಿಗಳಿಲ್ಲ, ಒಳಚರಂಡಿ ಇನ್ನೂ ಮಜೂರಾಗಿಲ್ಲ, 


ಎಲ್ಲರೂ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲೆ ನಿಲ್ಲಿಸುತ್ತಾರೆ. ಇನ್ನು ಮಹಾನಗರ ಪಾಲಿಕೆ ಯಾದರೆ ಇನ್ನು ನೂರು ವರುಷ ಕಳೆದರೂ ಒಳಚರಂಡಿಯಾಗುವುದು ಅನುಮಾನ. ಅಂತು ಇಂತ್ತು ನಮ್ಮ ಕಾಲದಲ್ಲಿ ಆಗುವ ಸಾದ್ಯತೆಗಳು ಕಾಣುವುದಿಲ್ಲ. ನಗರ ಸಭೆಯ ಎಲ್ಲಾ ಪ್ರದೇಶ ಅಭಿವೃದ್ದಿ ಯಾದ ನಂತರ ಮಹಾನಗರ ಪಾಲಿಕೆ ಆಗುವುದು ಉತ್ತಮ ಎಂದು ನನ್ನ ಅನಿಸಿಕೆ. 


   ಬಿ.ದೇವೇಂದ್ರ ಪ್ರಭು, ಮಾಜಿ ನಗರ ಸಭಾ ಸದಸ್ಯ ಮಣಿಪಾಲ ವಾರ್ಡ್.