ಮದುವೆಯಾಗಿ ಒಂದೇ ದಿನ ಕಳೆದಿತ್ತು. ಇನ್ನೇನು ಜೋಡಿಗಳು ದೈಹಿಕವಾಗಿ ಸಮಾಗಮಗೊಳ್ಳುವ ಸಮಯ. ಮಧುರ ಸಮಯವೊಂದು ಘಟಿಸ ಬೇಕಾದಲ್ಲಿ ಘೋರ ದುರಂತವೊಂದು ಸಂಭವಿಸಿ ಪತಿ, ಪತ್ನಿ ಜೀವ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಅಯೋಧ್ಯೆಲ್ಲಿ ನಡೆದಿದೆ.
ಪ್ರದೀಪ್-ಶಿವಾನಿ ಎಂಬವರ ವಿವಾಹ ಮಾರ್ಚ್ 7 ರಂದು ನಡೆದಿತ್ತು. ಮಾ. 8 ರಂದು ಅವರ ಫಸ್ಟ್ ನೈಟ್ ಇತ್ತು. ಆದರೆ, ಅಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ಬಂದ ಮೊಬೈಲ್ ಮೆಸೇಜ್ ಇಬ್ಬರ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ. ಆಗ ಇಬ್ಬರ ನಡುವೆ ಜಗಳವಾಗಿದ್ದು, ಪತಿ ಆಕೆಯ ಕತ್ತು ಹಿಸುಕಿ ಸಾಯಿಸಿದ್ದಾನೆ. ನಂತರ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಕೈಗೊಂಡಾಗ ಗೊತ್ತಾದ ಅಸಲಿ ವಿಚಾರವೆಂದರೆ ಪತಿ ತನಗೆ ತಾನೇ ಮೆಸೇಜ್ ಕಳುಹಿಸಿಕೊಂಡಿದ್ದ ಎಂಬುದು. ತನ್ನದೇ ಮೊಬೈಲ್ನಲ್ಲಿರುವ ಮತ್ತೊಂದು ನಂಬರ್ನಿಂದ ಮೆಸೇಜ್ ಕಳುಹಿಸಿಕೊಂಡಿದ್ದಾನೆ. ಇದು ಪತ್ನಿಯ ಸಂಶಯಕ್ಕೆ ಕಾರಣವಾಗಿ, ಅದು ವಿಕೋಪಕ್ಕೆ ತಿರುಗಿ ಹೋಗಿದೆ. ಮದುಮಗಳು, ಪತಿಯ ಹಳೆಯ ಸಂಬಂಧದ ವಿಚಾರವಾಗಿ ಮಾತನಾಡಿದ್ದಾಳೆ. ಇದು ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಮುಕ್ತಾಯಗೊಂಡಿದೆ.