ಮಣಿಪಾಲ, 28 ಮಾರ್ಚ್ 2025: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮೂತ್ರಪಿಂಡ ಆರೈಕೆ ಸೇವೆಗಳನ್ನು ಬಲಪಡಿಸುವ ಮಹತ್ವದ ಕ್ರಮದಲ್ಲಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ತನ್ನ ಹೊಸದಾಗಿ ನವೀಕರಿಸಿದ ಡಯಾಲಿಸಿಸ್ ಘಟಕವನ್ನು ಅನಾವರಣ ಗೊಳಿಸಿದೆ. ಡಾ ರಾಮದಾಸ್ ಪೈ ಬ್ಲಾಕ್‌ನಲ್ಲಿರುವ ಅತ್ಯಾಧುನಿಕ ಡಯಾಲಿಸಿಸ್ ಸೌಲಭ್ಯದ ಜೊತೆಗೆ, ವಿಸ್ತೃತ ಘಟಕವು ಆಸ್ಪತ್ರೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಜ್ಜಾಗಿದೆ. ಕರ್ನಾಟಕದ ಜನರಿಗೆ, ವಿಶೇಷವಾಗಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಯಿಂದ (ಸಿಕೆಡಿ) ಬಳಲುತ್ತಿರುವವರಿಗೆ ಉನ್ನತ-ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಆಸ್ಪತ್ರೆಯ ನಿರಂತರ ಬದ್ಧತೆಯಲ್ಲಿ ಇದು ಪ್ರಮುಖ ಮೈಲಿಗಲ್ಲು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ನವೀಕರಿಸಿದ ಘಟಕವನ್ನು ಉದ್ಘಾಟಿಸಿ, "ಈ ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆಯು ಕರಾವಳಿ ಕರ್ನಾಟಕದ ಜನರಿಗೆ ಮೂತ್ರಪಿಂಡ ಕಸಿ ಸೇವೆಗಳ ಜೊತೆಗೆ ಸಮಗ್ರ ಮೂತ್ರಪಿಂಡ ಆರೈಕೆಯನ್ನು ಒದಗಿಸುವ ನಮ್ಮ ಧ್ಯೇಯವನ್ನು ಪೂರೈಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ" ಎಂದು ಹೇಳಿದರು.
ಕೆಎಂಸಿ ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮೂತ್ರಪಿಂಡ ಶಾಸ್ತ್ರ ಮತ್ತು ಮೂತ್ರಪಿಂಡ ಕಸಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ದರ್ಶನ್ ರಂಗಸ್ವಾಮಿ ಸೇರಿದಂತೆ ಹಿರಿಯ ಮೂತ್ರಪಿಂಡ ಶಾಸ್ತ್ರ ತಜ್ಞರು ಉಪಸ್ಥಿತರಿದ್ದರು.
ಮೂತ್ರಪಿಂಡ ಶಾಸ್ತ್ರ ಹಾಗೂ ಮೂತ್ರಪಿಂಡ ಕಸಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ದರ್ಶನ್ ರಂಗಸ್ವಾಮಿ ಮಾತನಾಡಿ, ಭಾರತವು ಅತಿ ಹೆಚ್ಚು ಧೀರ್ಘ ಕಾಲದ ಮೂತ್ರ ಪಿಂಡದ ಕಾಯಿಲೆ ರೋಗಿಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ, ಪ್ರತಿ ಆರು ಜನರಲ್ಲಿ ಒಬ್ಬರು ಈ ಮೂಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಗಂಭೀರ ವಿಷಯವಾಗಿದೆ, ದೇಶದಲ್ಲಿ ಪ್ರತಿ ವರ್ಷ ಅಂದಾಜು ಒಂದು ಲಕ್ಷ ಹೊಸ ರೋಗಿಗಳು ಡಯಾಲಿಸಿಸ್ ಪ್ರಾರಂಭಿಸುತ್ತಿದ್ದಾರೆ.
ಮೂತ್ರಪಿಂಡ ಆರೈಕೆಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಅರ್ಥಮಾಡಿಕೊಂಡ ಕಸ್ತೂರ್ಬಾ ಆಸ್ಪತ್ರೆ ಈ ಪ್ರದೇಶದಲ್ಲಿ ವಿಶೇಷ ಡಯಾಲಿಸಿಸ್ ಸೇವೆಗಳನ್ನು ಒದಗಿಸುವಲ್ಲಿ ಬಹಳ ಹಿಂದಿನಿಂದಲೂ ಪ್ರವರ್ತಕವಾಗಿದೆ. ಆಸ್ಪತ್ರೆಯ ಡಯಾಲಿಸಿಸ್ ಸೇವೆಯನ್ನು 1971 ರಲ್ಲಿ ಪ್ರಾರಂಭಿಸಲಾಯಿತು, ಮತ್ತು 1991 ರಲ್ಲಿ ಸ್ಥಾಪಿಸಲಾದ ಔಪಚಾರಿಕ ಡಯಾಲಿಸಿಸ್ ಘಟಕವು ಕೆಲವು ವರ್ಷಗಳಲ್ಲಿ ಬ್ರಹತ್ ಘಟಕವಾಗಿ ಬೆಳೆದಿದೆ.
ನವೀಕರಿಸಿದ ಘಟಕವು ಪ್ರತಿ ಶಿಫ್ಟ್‌ಗೆ 30 ರೋಗಿಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು 24/7 ಡಯಾಲಿಸಿಸ್ ಸೇವೆಗಳನ್ನು ಒದಗಿಸುತ್ತದೆ. ಹೊರರೋಗಿ (OPD), ಒಳರೋಗಿ ಮತ್ತು ತೀವ್ರ ನಿಗಾ ಘಟಕಗಳಲ್ಲಿ , ವಿಶೇಷ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ನಿರ್ಣಾಯಕ ಆರೈಕೆಯನ್ನು ಒದಗಿಸುತ್ತದೆ" ಎಂದು ಅವರು ಹೇಳಿದರು.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಈ ಪ್ರದೇಶದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಮುಂದುವರೆಸುವ ನಿರಂತರ ಬದ್ಧತೆಯನ್ನು ಒತ್ತಿ ಹೇಳಿದರು ಮತ್ತು "ಕಸ್ತೂರ್ಬಾ ಆಸ್ಪತ್ರೆಯ ಡಯಾಲಿಸಿಸ್ ಸೇವೆಗಳು ಪ್ರಮಾಣಿತ ಕೊಡುಗೆಗಳನ್ನು ಮೀರಿ ಮಕ್ಕಳ ರೋಗಿಗಳಿಗೆ ವಿಶೇಷ ಡಯಾಲಿಸಿಸ್, ನಿರಂತರ ಡಯಾಲಿಸಿಸ್ ಸೇವೆಗಳು (CRRT) ಮತ್ತು ಹೋಮ್ ಡಯಾಲಿಸಿಸ್ ಆಯ್ಕೆಗಳನ್ನು ಒದಗಿಸುತ್ತವೆ, ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಗತ್ಯ ಸೇವೆಗಳನ್ನು ಪೂರೈಸುತ್ತವೆ.
ಆಸ್ಪತ್ರೆಯ ಸಮಗ್ರ ಮೂತ್ರಪಿಂಡ ಆರೈಕೆಯು ಡಾ ಟಿಎಂಎ ಪೈ ಆಸ್ಪತ್ರೆ ಉಡುಪಿ, ಡಾ ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಮತ್ತು ಬೈಂದೂರಿನ ಅಂಜಲಿ ಆಸ್ಪತ್ರೆಯಲ್ಲಿ ಸಹ ಹೊರರೋಗಿ ಮತ್ತು ಡಯಾಲಿಸಿಸ್ ಸೇವೆಗಳನ್ನು ನೀಡುತ್ತಿದೆ, ಇದು ಈ ಪ್ರದೇಶದ ರೋಗಿಗಳಿಗೆ ಡಯಾಲಿಸಿಸ್‌ಗೆ ಮತ್ತು ಮೂತ್ರಪಿಂಡ ಆರೈಕೆ ಸೇವೆ ಸುಲಭವಾಗಿ ದೊರೆಯುವುದನ್ನು ಖಚಿತಪಡಿ ಸುತ್ತದೆ" ಎಂದು ಹೇಳಿದರು.