ಉಡುಪಿ ಮಾ 30: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ, ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸ ವ ಹಾಗೂ ಯುಗಾದಿ ಹಬ್ಬದ ಪರ್ವ ಕಾಲದಲ್ಲಿ, ಭಜನಾ ಆರಾಧ್ಯ ದೇವರಾದ ವಿಠೋಭ ರುಖುಮಾಯಿ ಸನ್ನಿಧಿಯಲ್ಲಿ ಪುರಾಣ ಪ್ರಸಿದ್ಧ "ಗಿಂಡಿನರ್ತನ ಸೇವೆ" ನೆಡೆಯಿತು. ಗಿಂಡಿ ನರ್ತನ ಕಲಾವಿದರಾದ ನಾಡಾ ಸತೀಶ್ ನಾಯಕ್, ಶ್ರೀ ಚೇಂಪಿ ರಾಮಚಂದ್ರ ಅನಂತ ಭಟ್ ಉಡುಪಿ , ಪ್ರಶಾಂತ್ ಆಚಾರ್ಯ ಬಸ್ರುರು ಇವರು ಗಿಂಡಿನರ್ತನ ನೆಡೆಸಿಕೊಟ್ಟರು, ಹಿಮ್ಮೇಳನದ ಹಾಡುಗಾರಿಕೆಯಲ್ಲಿ ಸಗ್ರಿ ಗಣೇಶ್ ನಾಯಕ್, ಸಗ್ರಿ ವಿನೀತ್ ನಾಯಕ್, ಹಾರ್ಮೋನಿಯಂ ಪಾಂಡು ರಂಗ ದತ್ತ ಕಿಣಿ , ತಬಲಾದಲ್ಲಿ ಜಯದೇವ್ ಭಟ್ ಕಲ್ಯಾಣಪುರ ಸಹಕರಿಸಿದರು.
ದೇವಳದ ಪ್ರಧಾನ ಅರ್ಚಕರಾದ ವಿನಾಯಕ ಭಟ್, ಮುಕ್ತೇಸರ ಪಿ.ವಿ ಶೆಣೈ, ಹಾಗೂ ದೇವಳದ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಭಜನಾ ಮಂಡಳಿಯ ಸದಸ್ಯರು, ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು, ಯುವಕ ಮಂಡಳಿಯ ಸದಸ್ಯರು ನೂರಾರು ಸಮಾಜ ಭಾಂದವರು ಉಪಸ್ಥಿತ ರಿದ್ದರು.