ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೊಟ ಉಡುಪಿ , ಪರ್ಯಾಯ ಪುತ್ತಿಗೆ ಮಠ ಶ್ರೀ ಕೃಷ್ಣ ಮಠ ಉಡುಪಿ ಇವರ ಜಂಟಿ ಆಶ್ರಯದಲ್ಲಿ ರಾಜಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಯನ್ನು ಮುಖ್ಯ ಅತಿಥಿ ಶ್ರೀಮತಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ ಶ್ರುತಿ ಬಲ್ಲಾಳ ಮಾತನಾಡಿ ಹೆಣ್ಣು ಸಂಸಾರದ ಕಣ್ಣು , ಮಹಿಳೆಯರು ಉತ್ತಮ ಆರೋಗ್ಯಕ್ಕೆ ಮನೆಯಲ್ಲಿ ತಯಾರಿಸಿದ ಆಹಾರ ಸ್ವೀಕರಿಸಿ , ಪ್ಯಾಕೆಟ್ ಆಹಾರ ಬಳಕೆ ಬೇಡ , ಮಕ್ಕಳಿಗೆ ಜಂಕ್ ಫುಡ್ , ಮೊಬೈಲ್ ನಿಂದ ದೊರ ಇಡೀ ,,, ತಾಯಿಯೇ ಮಕ್ಕಳಿಗೆ ಮೊದಲ ಗುರು ಉತ್ತಮ ಸಂಸ್ಕಾರ ಕಲಿಸಿ , ನವ ವಧು ವರರಲ್ಲಿ ಮಧುಮೇಹ ಪತ್ತೆ ಯಾಗುತ್ತಿದ್ದು ಅಂತಕದ ವಿಷಯ , ನಿತ್ಯ ವ್ಯಾಯಾಮ , ವಾಕಿಂಗ್ , ಯೋಗ ಮಾಡುವುದರ ಜೊತೆಗೆ ಮಹಿಳೆಯರು ವರ್ಷ ಕ್ಕೆ ಒಮ್ಮೆಯಾದರೂ ಅರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ಸಲಹೆ ನೀಡಿ ವಿಶ್ವ ಮಹಿಳಾ ದಿನಾಚರಣೆಯ ಶುಭ ಹಾರೈಸಿದರು.
ವೇದಿಕೆಯಲ್ಲಿ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ , ಪ್ರತಿಭಾ ಪುರಸ್ಕಾರದಲ್ಲಿ ಯಕ್ಷಗಾನ ಕಲಾವಿದೆ ಪ್ರೇಮಾ ಮಹೇಶ್ ಗೌರವಿಸಲಾಯಿತು , ತಾಲೂಕು ಮಹಿಳಾ ಮಂಡಳಿಗಳ ಒಕ್ಕೊಟ ಉಡುಪಿ ಇದರ ಅಧ್ಯಕ್ಷೆ ಪದ್ಮಾ ರತ್ನಾಕರ್ , ಉಪಾಧ್ಯಕ್ಷೆ ಗೀತಾ ವಾಗ್ಲೆ , ಕೋಶಾಧಿಕಾರಿ ರೇವತಿ , ಜಿಲ್ಲಾ ಒಕ್ಕೊಟದ ವಸಂತಿ ರಾವ್ , ಸುಪ್ರಭಾ ಆಚಾರ್ಯ , ಶ್ರೀ ಮಠದ ರಮೇಶ್ ಸಹಕರಿಸಿದರು ,
ಒಕ್ಕೊಟದ ಮಹಿಳಾ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಜರಗಿತು. ಶ್ರೀಮತಿ ಸುಷ್ಮಾ ಶಿವರಾಮ ಶೆಟ್ಟಿ ಸ್ವಾಗತಿದರು ,ಶ್ರೀಮತಿ ಜ್ಯೋತಿ ರಾವ್ ನಿರೂಪಣೆಜಿ ಗೈದರು , ಶ್ರೀಮತಿ ಸಹಾಯ ಮೇರಿ ವಂದಿಸಿದರು