ಪೆರ್ಡೂರು ಗೆಳೆಯರ ಬಳಗದ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ
ಹೆಬ್ರಿ : ಅನಾರೋಗ್ಯದ ನಡುವೆ ತೀರಾ ಬಡತನದಲ್ಲಿ ಜೀವನ ಸಾಗಿಸಿದ್ದ ಪಾಡಿಗಾರ ಐದು ಸೆಂಟ್ಸ್ ನಿವಾಸಿ ಉದಯ್ ಪೂಜಾರಿ ಕುಟುಂಬಕ್ಕೆ ಪೆರ್ಡೂರು ಗೆಳೆಯರ ಬಳಗದ ತಂಡ 5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿ ಮಾ.2ರಂದು ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಉದಯ್ ಪೂಜಾರಿ ಅವರು ತನ್ನ ಸ್ವಂತ ಸೂರನ್ನು ಕಟ್ಟಬೇಕು ಎಂಬ ಕನಸು ಅನಾರೋಗ್ಯ ಕಾರಣ ದಿಂದ ಪೂರ್ಣಗೊಳ್ಳಲಿಲ್ಲ. ಮಕ್ಕಳನ್ನು ಓದಿಸಬೇಕು ಈ ನಡುವೆ ಮನೆ ಕಟ್ಟುವುದು ಹೇಗೆ ಎಂಬ ಅಲೋಚನೆಯಲ್ಲಿದ್ದಾಗ ಇದನ್ನು ಗಮನಿಸಿದ ಗೆಳೆಯರ ಬಳಗ ಪೆರ್ಡೂರು ತಂಡ ಸದಸ್ಯರೇ ಒಟ್ಟುಗೂಡಿಸಿದ ೫ಲಕ್ಷ ರೂ.ಹಣದಿಂದ ಮನೆ ನಿರ್ಮಿಸಿ ಕೊಟ್ಟಿರುವುದು ಮಾತ್ರವಲ್ಲದೆ ತಂಡದ ಸದಸ್ಯರೆ ನಿಂತು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ನಿರಂತರ ಸಮಾಜಮುಖಿ ಸೇವೆ : ಕಳೆದ 14 ವರ್ಷಗಳಿಂದ ಪೆರ್ಡೂರು ಸುತ್ತಮುತ್ತ ಪ್ರದೇಶಗಳಲ್ಲಿ ಸಮಾಜಮುಖಿ ಚಟುವಟಿಕೆ ಜೊತೆ ಅಸಕ್ತರಿಗೆ ಸಹಾಯ ಧನ, ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸಹಾಯ, ರಕ್ತದಾನ ಆರೋಗ್ಯ ತಪಾಸಣಾ ಶಿಬಿರಗಳು, ಬಡ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಸೇರಿದಂತೆ ಪ್ರತಿ ವರ್ಷ ಸುಮಾರು 2 ಲಕ್ಷಕ್ಕೂ ಮಿಕ್ಕಿ ಸಹಾಯಸ್ತ ಚಾಚುತ್ತ ಬಂದಿರುವ ಪೆರ್ಡೂರು ಗೆಳೆಯರ ಬಳಗ ತಂಡ ಶಾಶ್ವತ ಸೇವಾ ಯೋಜನೆಯಾಗಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡ ಲಾಗಿದೆ.
ಪೆರ್ಡೂರು ಗೆಳೆಯರ ಬಳಗದ ಸ್ಥಾಪಕಾಧ್ಯ ಕ್ಷ ಸತೀಶ್.ಪಿ,ಗೌರವಾಧ್ಯಕ್ಷ ಸತೀಶ್ (ಅಣ್ಣು), ಅಧ್ಯಕ್ಷ ನಿತಿನ್ ಮೆಂಡನ್,ಕಾರ್ಯದರ್ಶಿ ಮಂಜುನಾಥ ಶೆಟ್ಟಿ,ಗೌರವ ಸಲಹೆಗಾರ ಸತೀಶ್ ಶೆಟ್ಟಿ ಕುತ್ಯಾರು ಬೀಡು,ಕೋಶಽಕಾರಿ ನಿಶ್ವಲ್ ಶೆಟ್ಟಿ, ಫಲಾನುಭವಿ ಉದಯ ಪೂಜಾರಿ ಮೊದಲಾದವರು ಉಪಸ್ಥಿತರಿ ದ್ದರು.