Header Ads Widget

ಶಿಸ್ತಿನ ಸರಿಯಾದ ಪಾಲನೆಯೇ ಎನ್ ಎಸ್ ಎಸ್ ಶಿಬಿರದ ಯಶಸ್ಸಿನ ಗುಟ್ಟು ~ ಪ್ರೊ.ಉಷಾ ನಾಯಕ್

 


"ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಸನಕ್ಕೆ ಬಹುದೊಡ್ಡ ವೇದಿಕೆ.ಇದು  ಸಾರ್ಥಕವಾಗಬೇಕಾದರೆ ಶಿಸ್ತಿನ ಪಾಲನೆ ಅತ್ಯಗತ್ಯ. ಶಿಬಿರದಲ್ಲಿ ಪಾಲನೆಯಾಗುವ ಶಿಸ್ತಿನ ಪಾಠವೇ ವಿದ್ಯಾರ್ಥಿಗಳ ಬದುಕನ್ನು ಸ್ಪಷ್ಟವಾಗಿ ರೂಪಿಸುವಂಥದ್ದು" ಎಂದು ಪ್ರೊ.ಉಷಾ ನಾಯಕ್ ಅವರು ಅಭಿಪ್ರಾಯ ಪಟ್ಟರು. 



ಅವರು ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ದಿನಾಂಕ 25 - 2-2025ನೇ ಮಂಗಳ ವಾರ ನಡೆದ ಶ್ರೀ ಪೂರ್ಣಸಂಧ್ಯಾ ಕಾಲೇಜು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.


 ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಪಾಂಡುರಂಗ ನಾಯಕ್, ಶ್ರೀ ರಾಮ ದಾಸ ನಾಯಕ್, ಎರಡನೇ ಮೊಕ್ತೇಸ ರರಾದ  ಶ್ರೀ ಸಚೀಂದ್ರ ಕಾಮತ್, ಎನ್ ಎಸ್ ಎಸ್ ಘಟಕದ ಯೋಜನಾಧಿಕಾರಿಗಳಾದ ಡಾ.ಪ್ರಜ್ಞಾ ಮಾರ್ಪಳ್ಳಿ, ವಿದ್ಯಾರ್ಥಿ ನಾಯಕರುಗಳಾದ ಕು.ಶ್ರಾವ್ಯ ,ಕು. ವೈಷ್ಣವಿ, ಗಗನ್ ಕೆ.ಸುವರ್ಣ, ಗುರುರಾಜ್ ಎಂ‌. ಶೇಟ್ ಅವರು ಉಪಸ್ಥಿತರಿದ್ದರು.  


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ.ಜೆ. ಅವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಶಿಬಿರದ ಯಶಸ್ಸಿಗೆ ಸಹಕರಿಸಿದವರನ್ನು ಗುರುತಿಸಿ ಗೌರವಿಸಲಾಯಿತು. ಕು.ಶ್ರಾವ್ಯಾ ಅವರು ಸ್ವಾಗತಿಸಿ, ಮತ್ತೋರ್ವ ಯೋಜನಾಧಿಕಾರಿಗಳಾದ ಶ್ರೀ ಚಿರಂಜನ್ ಕೆ ಶೇರಿಗಾರ್ ಅವರು ವಂದಿಸಿದರು. ಕು.ಸಪ್ನಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.