ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಉಡುಪಿ ಶ್ರೀ ಅದಮಾರು ಮಠ ಎಜ್ಯುಕೇಶನ್ ಕೌನ್ಸಿಲ್ ಬೆಂಗಳೂರಿನ ಗೌರವ ಕಾರ್ಯದರ್ಶಿಗಳಾಗಿರುವ ಡಾ. ಎ.ಪಿ.ಭಟ್ ಮತ್ತು ಆಕಾಡೆಮಿಕ್ಸ್ ಮತ್ತು ಟ್ರೈನಿಂಗ್‌ನ ಡೈರೆಕ್ಟರ್ ಆಗಿರುವಂತಹ ಡಾ.ಸಿ.ಕೆ ಮಂಜುನಾಥ್ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಡಾ. ರಾಮು.ಎಲ್ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಸಂಘದ ಸಂಯೋಜಕರಾದ ಡಾ.ಸಂತೋಷ್ ಕುಮಾರ್ ಕೆ ಉಪಸ್ಥಿತರಿದ್ದು ಅಭ್ಯಾಗತರನ್ನು ಸ್ವಾಗತಿಸಿದರು.
ಉದ್ಘಾಟನಾ ಭಾಷಣಕಾರರಾಗಿ ಡಾ.ಸಿ.ಕೆ.ಮಂಜುನಾಥ್ ವಿಜ್ಞಾನ ದಿನದ ಆಚರಣೆ ಮಹತ್ವದ ಕುರಿತು ಹಾಗೂ ಡಾ.ಎ.ಪಿ.ಭಟ್ ರವರು ಸಿ.ವಿ.ರಾಮನ್ ಅವರ ಸಂಶೋದನೆಯ ಹಾಗೂ ಮಕ್ಕಳಿಗೆ ಸಂಶೋದನೆಯ ಮಹತ್ವದ ಕುರಿತು ಮಾತನಾಡಿದರು.
ವಿದ್ಯಾರ್ಥಿ ಸಂಚಾಲಕಿ ಮಿಸ್ ಸಹನ ದೀಪ್ತಿ ಇವರು ನಿರೂಪಿಸಿ ವಂದಿಸಿದರು.