ಜಗತ್ತಿನ ಮಹಾಮಾರಿಗಳಲ್ಲಿ ಒಂದಾದ ಏಡ್ಸ್ ಖಾಯಿಲೆಯು ನಮ್ಮನ್ನು ಭಾಧಿಸದಂತೆ ಇರಬೇಕಾದರೆ ಅದರ ಕುರಿತಾದ ಅರಿವು ಅತ್ಯಗತ್ಯ. ದಾಂಪತ್ಯ ನಿಷ್ಠೆ, ಸುರಕ್ಷತೆ, ಮತ್ತು ವ್ಯಸನಗಳಿಂದ ದೂರವಿರುವುದೇ ಏಡ್ಸ್ ನಿರ್ಮೂಲನೆಯ ಮೂಲ ಮಂತ್ರವಾಗಲಿ ಎಂದು ಉಡುಪಿ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಸಂಯೋಜನಾಧಿಕಾರಿಗಳಾದ ಶ್ರೀ ಮಹಾಬಲೇಶ್ವರ ಅವರು ಅಭಿಪ್ರಾಯಪಟ್ಟರು. ಅವರು ದಿನಾಂಕ 19-03-25 ರಂದು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ಏಡ್ಸ್ ಜಾಗೃತಿ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ ಜೆ ಅವರು ವಹಿಸಿಕೊಂಡಿದ್ದರು. ಈ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನೂ ವಿತರಿಸಲಾಯಿತು.ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ಡಾ.ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿ, ಇನ್ನೋರ್ವ ಯೋಜನಾಧಿಕಾರಿಗಳಾದ ಶ್ರೀ ಚಿರಂಜನ್ ಕೆ ಶೇರಿಗಾರ್ ಅವರು ವಂದಿಸಿದರು.ಸ್ವಯಂ ಸೇವಕಿಯಾದ ಕು.ಸ್ವಪ್ನ ಕಾರ್ಯಕ್ರಮ ನಿರೂಪಿಸಿದರು.