Header Ads Widget

ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ಬ್ಯಾಂಕ್ ವತಿಯಿಂದ ರಸಪ್ರಶ್ನೆ ಕಾರ್ಯಕ್ರಮ.


ಉಡುಪಿ ದೊಡ್ಡಣ್ಣ ಗುಡ್ಡೆ ಶ್ರೀಚಕ್ರ ಪೀಠ ಸುರ ಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಆವರಣದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಸಂಸ್ಥಾಪಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ಬ್ಯಾಂಕ್ ಕುಂಜಿಬೆಟ್ಟು ಶಾಖೆ ಇದರ ವತಿಯಿಂದ ಶಾಲಾ ಮಕ್ಕಳಿಗಾಗಿ ಕರ್ನಾಟಕ ಬ್ಯಾಂಕ್ ರಸಪ್ರಶ್ನೆ ಕಾರ್ಯಕ್ರಮ ಜರಗಿತು.


ಶಾಲಾ ಸಂಸ್ಥಾಪಕ ಶ್ರೀ ಶ್ರೀ ರಮಾನಂದ ಗುರೂಜಿ ದೀಪ ಪ್ರಜ್ವಲನೆ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.. ಕುಂಜಿಬೆಟ್ಟು ಬ್ರಾಂಚ್ ನ ಶಾಖಾಧಿಕಾರಿ ಶ್ರೀ ಪ್ರತೀಕ್ ಬ್ಯಾಂಕಿನಾ ಇತಿಹಾಸ ಮತ್ತು ಮಹತ್ವವನ್ನು ವಿವರಿಸಿದರು.


ಬ್ಯಾಂಕ್ ಸಿಬ್ಬಂದಿಗಳಾದ ಶ್ರೀಮತಿ ಕಾವ್ಯ ವಾಗ್ಲೇ, ರಾಧಿಕಾ, ಸುಷ್ಮಾ, ಶ್ರುತಿ ಗೊರೆ, ಶ್ರೀ ಪ್ರಶಾಂತ್ ಅಡಿಗ, ಸುಪ್ರೀತ್ ತಂತ್ರಿ, ರಮೇಶ್ ನಾಯ್ಕ್ ರವರು ಮಕ್ಕಳಲ್ಲಿ ಬ್ಯಾಂಕ್ ವ್ಯವಹಾರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಬ್ಯಾಂಕಿನ ಖಾತೆಯ ವಿವರ ಮತ್ತು ಇತರ ಸೌಲಭ್ಯದ ವಿವರಗಳನ್ನು ತಿಳಿಸಿದರು...

ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಬ್ಯಾಂಕಿನ ಉಡುಪಿ ವಲಯ ಮುಖ್ಯಸ್ಥ,ಆಗಮ್ ಶ್ರೀ ವಾದಿರಾಜ್. ಕೆ ಮತ್ತು ಚೀಫ್ ಮ್ಯಾನೇಜರ್ ಶ್ರೀ ಪ್ರದೀಪ್ ಕುಮಾರ್ ಸನ್ಮಾನಿಸಿದರು.


ಬ್ಯಾಂಕಿನ ಮಹಿಳಾ ಸಿಬ್ಬಂದಿಗಳನ್ನು ಅಂತಾ ರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು...


ಶ್ರೀ ರಮಾನಂದ ಗುರೂಜಿಯವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ಪ್ರಾಂಶುಪಾಲೆ ಶ್ರೀಮತಿ ಉಷಾ ರಮಾನಂದ ಅಥಿತಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಸ್ವಾತಿ ಪ್ರತೀಕ್ ಪ್ರಾರ್ಥನೆ ಗೈದರು. ಶಿಕ್ಷಕಿ ಚಂದ್ರಕಲಾ ಶರ್ಮ ವಂದಿಸಿದರು.


ಶಾಲಾ ಸಂಯೋಜಕಿ ಶ್ರೀ ಮತಿ ಕುಸುಮ ನಾಗ ರಾಜ್ ಆಚಾರ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಹನುಮಂತನಗರ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಲಲಿತಾ, ಶಾಲಾ ಶಿಕ್ಷಕಿಯರಾದ ರೇವತಿ, ಪ್ರತಿಮಾ ಆಚಾರ್ಯ, ತ್ರಿವೇಣಿ ಭಟ್ ಕಾವ್ಯ ಹೆಬ್ಬಾರ್, ಸುಚಿತ್ರ ರಾವ್, ತೀರ್ಥಕಲಾ, ಮೃಣಾಲ್ ಕೃಷ್ಣ ಉಪಸ್ಥಿತರಿದ್ದರು..