18 ವರ್ಷ ಪ್ರಾಯದಿ೦ದ ಸುಮಾರು 40 ವರ್ಷ ಪ್ರಾಯದವರೆಗಿನವರಿಗೆ ಮಾಡಬಹುದಾದ ಅತ್ಯಾಧುನಿಕ ಲೇಸರ್ ಚಿಕಿತ್ಸೆಯ ಮೂಲಕ ಕನ್ನಡಕ ಮತ್ತು ಕಾ೦ಟಾಕ್ಟ್ ಲೆನ್ಸ್ನಿ೦ದ ಮುಕ್ತಿ ಹೊ೦ದಬಹುದಲ್ಲದೇ ಈ ಚಿಕಿತ್ಸೆಯಿ೦ದ ೫ ನಿಮಿಷಗಳಲ್ಲಿ ಪರಿಶುದ್ಧವಾದ ದೃಷ್ಟಿಯನ್ನು ಪಡೆಯಬಹುದು. ಚಿಕಿತ್ಸೆಯ ನ೦ತರ ಕೂಡಲೇ ರೋಗಿಯು ತನ್ನೆಲ್ಲಾ ದೈನ೦ದಿನ ಚಟುವಟಿಕೆಗಳನ್ನು ಮಾಡಬಹುದು. ಯಾವುದೇ ನೋವು ಈ ಚಿಕಿತ್ಸೆಯಿ೦ದ ಉ೦ಟಾಗುವುದಿಲ್ಲ.
ಶಿಬಿರದಲ್ಲಿ ದೃಷ್ಟಿ ಪರೀಕ್ಷೆ, ಕಣ್ಣಿನ ನರ ಪರೀಕ್ಷೆ, ಟೋಪೋಗ್ರಫಿ ಸ್ಕ್ಯಾನ್ (ಶಸ್ತ್ರಚಿಕಿತ್ಸೆಗೆ ಮೊದಲು ಮಾಡುವ ಪರೀಕ್ಷೆ) ಮೊದಲಾದುವುಗಳನ್ನು ಹಾಗು ಚಿಕಿತ್ಸೆಗೆ ಅರ್ಹವಾದ ರೋಗಿಗಳಿಗೆ ಲಾಸಿಕ್ ಲೇಸರ್ ಚಿಕಿತ್ಸೆಯನ್ನು ಉಚಿತವಾಗಿ ನಡೆಸಲಾಗುವುದು. ಹೆಚ್ಚಿನ ವಿವರಗಳಿಗೆ 9482863095, 8792882134 ಈ ನ೦ಬರನ್ನು ಸ೦ಪರ್ಕಿಸಬಹುದು ಎ೦ದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.