Header Ads Widget

ಚಿನ್ನ ಕಳ್ಳತನ ಮಾಡಿದ ಆರೋಪಿ ಪ್ರವೀಣ್ ಕುಮಾರ್ ಮಣೂರು ಅಂದರ್

ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 57/2025 ಕಲಂ 331(4), 305 ಬಿ.ಎನ್.ಎಸ್. ಪ್ರಕರಣಕ್ಕೆ ಸಂಬಂದಿಸಿದಂತೆ, ಕೋಟಾ ಪೊಲೀಸ್ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ರಾಘವೇಂದ್ರ ಸಿ ಮತ್ತು ಸುಧಾಪ್ರಭು, ಜಯ ಪ್ರಕಾಶ್, ಎ.ಎಸ್.ಐ. ಮತ್ತು ಹೆಡ್ ಕಾನ್ಸಟೇಬಲ್ ರೇವತಿ, ಕೃಷ್ಣ, ಶ್ರೀಧರ್ ಹಾಗೂ ಕಾನ್ಸಟೇಬಲ್ ರಾಘವೇಂದ್ರ ಮತ್ತು ವಿಜಯೇಂದ್ರ ರವರ ತಂಡ ಚಿನ್ನ ಕಳ್ಳತನ ಮಾಡಿದ ಆರೋಪಿ ಪ್ರವೀಣ್ ಕುಮಾರ್ (38), ಮಣೂರು, ಕುಂದಾಪುರ ಈತನನ್ನು ಪತ್ತೆ ಹಚ್ಚಿ ದಿನಾಂಕ 25.03.2025 ರಂದು ತೆಕ್ಕಟ್ಟೆ ಬಳಿಯಲ್ಲಿ ದಸ್ತಗಿರಿಗೊಳಿಸಿ, ಆತನಿಂದ 25 ಗ್ರಾಂ ತೂಕದ ಸುಮಾರು 2.5 ಲಕ್ಷ ಮೌಲ್ಯದ ಕಳ್ಳತನವಾಗಿದ್ದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.