ಉಡುಪಿ: ಸ್ನೇಹ ಯೂತ್ ಕ್ಲಬ್ ಬಾಳ್ಳಟ್ಟ ಹಿರೇಬೆಟ್ಟು ಇದರ 23ನೇ ವಾರ್ಷಿಕೋತ್ಸವವು ಬೊಬ್ಬರ್ಯ ಕಟ್ಟೆ ಮೈದಾನದಲ್ಲಿ ಜರುಗಿದ್ದು, ಸುಲೋಚನಾ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಯೂತ್ ಕ್ಲಬ್‌ನ ಅಧ್ಯಕ್ಷ ಸುಧಾಕರ ನಾಯಕ್ ಸಾಗು ಸಭಾಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಹಾಗೂ ಉಡುಪಿ ಜಿಲ್ಲಾ ಸೌಟ್ ಆಯುಕ್ತ ಜನಾರ್ದನ ಕೊಡವೂರು, ಡಾ. ಪ್ರತಿಮಾ ಜಯಪ್ರಕಾಶ ಆಚಾರ್ಯ ಮಾಹೆ ಮಣಿಪಾಲ, 80ನೇ ಬಡಗಬೆಟ್ಟು ಗ್ರಾ.ಪಂ. ಅಧ್ಯಕ್ಷ ಕೇಶವ ಕೋಟ್ಯಾನ್ ಬೊಟ್ಟಿಕಂಬಳ, ಆತ್ರಾಡಿ ಹಿರೇಬೆಟ್ಟು ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಬಾಳ್ಯಟ್ಟ, ಆತ್ರಾಡಿ ಹಿರೇಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಶರತ್ ಹೆಗ್ಡೆ, ವಿನಂತಿ ನಾಯ್ಕ ಕಂಚಿನಬೈಲ್, ಮಾಜಿ ಅಧ್ಯಕ್ಷರಾದ ಸುಬ್ರಾಯ ಆಚಾರ್ಯ, ಅಶೋಕ್ ನಾಯಕ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಿವಂಗತ ಬಾಲಕೃಷ್ಣ ಹಗ್ಡೆ ಅವರ ಸ್ಮರಣಾರ್ಥ ಪುತ್ರ ಸುಜಿತ್ ಕುಮಾರ್ ಹೆಗ್ಡೆ ಅವರು 20 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ದಿವಂಗತ ಜಲಜಾ ವಾಮನ್ ನಾಯಕ್ ಕಾಳಬೆಟ್ಟು ಅವರ ಸ್ಮರಣಾರ್ಥ ಪುತ್ರ ರಮೇಶ್ ನಾಯಕ್ 10 ಮಂದಿಗೆ, ಹಾಗೂ ಯೂತ್ ಕ್ಲಬ್ ವತಿಯಿಂದ 61 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು. ಒಟ್ಟು 80ಸಾವಿರ ರೂಪಾಯಿ ವಿದ್ಯಾರ್ಥಿವೇತನ ವಿತರಿಸಲಾಯಿತು.
ಸಂದೀಪ್ ನಾಯ್ ಕಬ್ಬಾಡಿ ವಾರ್ಷಿಕ ವರದಿ ಮಂಡಿಸಿದರು. ಸುಜಿತ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ದಿನೇಶ್ ಪ್ರಭು ನಿರೂಪಿಸಿ, ಯಜ್ಞನಾಥ ಆಚಾರ್ಯ ವಂದಿಸಿದರು. ಮನೋರಂಜನೆಯ ಕಾರ್ಯಕ್ರಮ ದಲ್ಲಿ ಲಕುಮಿತಂಡ ಮಂಗಳೂರು ಇವರಿಂದ ತುಳುನಾಟಕ 'ಒರಿಯಾಂಡಲಾ ಸರಿಬೋಡು' ಪ್ರದರ್ಶನಗೊಂಡಿತು.