Header Ads Widget

ಕೊಲೆಗಡುಕರು, ಕಳ್ಳರನ್ನು ಹಿಡಿಯದ ಎಸ್ಪಿ, ಸುಮೊಟೋ ದಾಖಲಿಸಲಷ್ಟೇ ಯೋಗ್ಯ - ಶ್ರೀನಿಧಿ ಹೆಗ್ಡೆ. Srinidhi

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ದದ ಸುಮೊಟೋ ಪ್ರಕರಣಕ್ಕೆ ಶ್ರೀನಿಧಿ ಹೆಗ್ಡೆ ಆಕ್ರೋಶ*

ಉಡುಪಿ: ತಾನು ದಕ್ಷ ಅಧಿಕಾರಿ ಎಂದು ಬಿಂಬಿ ಸುತ್ತಿರುವ ಜಿಲ್ಲಾ ಎಸ್ಪಿ ಡಾ.ಅರುಣ್ ಜಿಲ್ಲೆಯಲ್ಲಿ ನಡೆದ ಕೊಲೆ, ಕಳ್ಳತನ ಪ್ರಕರಣಗಳಲ್ಲಿ ಆರೋಪಿ ಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾದ ಅವರು ಸುಮೊಟೋ ಪ್ರಕರಣ ದಾಖಲಿಸಿ, ಪ್ರತಿಭಟಿಸು ವವರ ಧ್ವನಿಯನ್ನು ಅಡಗಿಸುವ ಪ್ರಯತ್ನವನ್ನು ಮಾಡುತ್ತಿರುವುದು ನಾಚಿಕೆಗೇಡು ಎಂದು ಹೈ ಕೋರ್ಟ್ ವಕೀಲ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ್ ಶ್ರೀನಿಧಿ ಹೆಗ್ಡೆ ಆರೋಪಿಸಿದ್ದಾರೆ.


ಮಲ್ಪೆ ಠಾಣೆಯಲ್ಲಿ ರಾಜಿಯಾದ ಪ್ರಕರಣದಲ್ಲಿ ತನಿಖೆಗೆಂದು ಕರೆಸಿ, ಕುತಂತ್ರದಿಂದ ಮಹಿಳಾ ಮೀನುಗಾರರು ಹಾಗು ಪುರುಷ ಮೀನುಗಾರರನ್ನು ಬಂಧಿಸಲಾಗಿದೆ. ಅವರ ಪರವಾಗಿ ಧ್ವನಿಎತ್ತಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ವಿರುದ್ದ ಸುಮೊಟೋ ದಾಖಲಿಸಿದ್ದೀರಿ. ಯಾರೋ ಅಮಾಯಕ ಪಿಎಸ್ಐಗಳನ್ನು ದಬಾಯಿಸಿ ಸುಮೊಟೋ ದೂರು ದಾಖಲಿಸುವ ತಾವು ಕಚೇರಿ ಬಿಟ್ಟು ಹೊರಗೆ ಬರಬೇಡಿ. ನೀವು ಮಾಡುವು ದನ್ನೆಲ್ಲಾ ಒಪ್ಪಿಕೊಳ್ಳುತ್ತೇವೆ ಎಂಬ ಭ್ರಮೆಯಿಂದ ಹೊರಗೆ ಬನ್ನಿ ಎಂದಿದ್ದಾರೆ.


ಕಾನೂನಿನಲ್ಲಿ ಪಾಂಡಿತ್ಯ ಮಾಡಿದವರಂತೆ ಬಿಂಬಿಸುವ ತಾವು, ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ 2024 ರ ಮಾ. 2 ರಾತ್ರಿ ನಡೆದ ಕೃಷ್ಣಾ ಎಂಬ ದಲಿತ ಯುವಕನ ಶೂಟೌಟ್ ಪ್ರಕರಣದಲ್ಲಿ ಇದುವರೆಗೆ ಆರೋಪಿಗಳನ್ನು ಪತ್ತೆಹಚ್ಚಿಲ್ಲ. ಆ ಕುಟುಂಬಕ್ಕೆ ನ್ಯಾಯ ಒದಗಿ ಸುವಲ್ಲಿ ತಾವು ವಿಫಲವಾಗಿದ್ದೀರಿ ಎಂದು ಕಿಡಿ ಕಾರಿದ್ದಾರೆ.


2024 ಜು.31 ರಂದು ಬ್ರಹ್ಮಗಿರಿಯ ವಸತಿ ಸಮುಚ್ಚಯಗಳಿಗೆ ನಾಲ್ವರು ಮುಸುಕುಧಾರಿಗಳ ತಂಡವು ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿತ್ತು. ಫ್ಲ್ಯಾಟ್ ನ ಸಿಸಿಟಿವಿ ದೃಶ್ಯಾವಳಿಗಳಿಂದ ಕೃತ್ಯವು ಬೆಳಕಿಗೆ ಬಂದಿತ್ತು‌. ಇದುವರೆಗೆ ಆರೋಪಿಗಳ ಪತ್ತೆಯಾಗಿಲ್ಲ.


ನಗರ ಠಾಣಾಯಿಂದ ಕೂಗಳತೆ ದೂರದಲ್ಲಿರುವ ಕಂದಾಯ ಇಲಾಖೆಯ ಸಿ ದರ್ಜೆ ನೌಕರರ ವಸತಿ ಸಮುಚ್ಚಯದ ಆರು ಮನೆಗೆ 2024 ರ ಸೆ.29 ರ ತಡರಾತ್ರಿ ಕಳ್ಳರು ನುಗ್ಗಿ ಸರಣಿ ಕಳ್ಳತನ ನಡೆಸಿದ್ದರು.


ಒಂದೇ ಆವರಣದೊಳಗಿರುವ ವಸತಿ ಸಮುಚ್ಚ ಯದ 6 ಮನೆಗಳ ಬೀಗವನ್ನು ಕಳ್ಳರು ಒಡೆದು, ಮನೆಯ ಕಪಾಟನ್ನು ಚೆಲ್ಲಾಪಿಲ್ಲಿಯಾಗಿಸಿ, ಒಂದು ಮನೆಯಲ್ಲಿ ಸುಮಾರು 120 ಗ್ರಾಂ‌ ಚಿನ್ನ, 20 ಸಾವಿರ ನಗದು ಹಾಗು ಮತ್ತೊಂದು ಮನೆಯಲ್ಲಿ 20 ಸಾವಿರ ನಗದು ಒಯ್ದಿದ್ದಾರೆ. ಉಳಿದ ಮೂರು ಮನೆಯಲ್ಲಿ ಯತ್ನ ವಿಫಲವಾಗಿತ್ತು. ಈ ಪ್ರಕರಣ ಜಾಡು ಹಿಡಿದ ಪೋಲಿಸರಿಗೆ ಆರೋಪಿಗಳ ಪತ್ತೆಯೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ.


2025 ಫೆ.24 ರಂದು ನಿಮ್ಮದೇ ಇಲಾಖೆಯ ಡಿಎಆರ್ ವಸತಿಗೃಹಕ್ಕೆ ಕಳ್ಳರು ನುಗ್ಗಿದರು. ಅವರನ್ನು ಪತ್ತೆಹಚ್ಚಲು ವಿಫಲವಾದ ನೀವು ಕೇವಲ ಸಿಬ್ಬಂದಿಗಳನ್ನು ಅಮಾನತು ಮಾಡುವುದು, ಸುಮೊಟೋ ಕೇಸು ದಾಖಲಿಸುವುದು ಬಿಟ್ಟರೇ ಮತ್ಯಾವ ಸಾಧನೆ ಮಾಡಿದ್ದೀರಿ..? ಎಂದು ಪ್ರಶ್ನಿಸಿದ್ದಾರೆ.


ಈ ಎಲ್ಲಾ ಪ್ರಕರಣಗಳನ್ನು ಭೇದಿಸಲು ಪೋಲಿಸ್ ಸಿಬ್ಬಂದಿಗಳ ಕೊರತೆಯೂ ಇರಬಹುದು. ಕ್ಷುಲ್ಲಕ ವಿಚಾರಕ್ಕೆ ಸಿಬ್ಬಂದಿಗಳ ವೇತನ ಕಡಿತ, ಅಮಾನತು ಮಾಡುತ್ತ ಅವರಿಗೆ ಮಾನಸಿಕ ಕಿರುಕಳ ನೀಡಿದ್ದೀರಿ. ಈ ರೀತಿಯ ಕ್ರಮಗಳಿಂದ ಸಿಬ್ಬಂದಿಯ ವಿಶ್ವಾಸ ವನ್ನು ಪಡೆಯುವಲ್ಲಿ ವಿಫಲವಾಗಿ, ಜನತೆ ನ್ಯಾಯ ನೀಡುವಲ್ಲಿ ತಾವು ಸೋತ್ತಿದ್ದೀರಿ.


ಜಿಲ್ಲಾ ಎಸ್ಪಿ ಕಾನೂನು & ಸುವ್ಯವಸ್ಥೆ ಕರ್ತವ್ಯ ನಿರ್ವಹಿಸಲು ತಾವು ಅರ್ಹರೇ..? ಕೇವಲ ಸುಮೊಟೋ ಪ್ರಕರಣ ದಾಖಲಿಸಿ ಪ್ರಜಾಪ್ರಭುತ್ವದ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುವ ತಾವು ತಮ್ಮ ಇಲಾಖೆಯಲ್ಲಿನ ಯಾವುದಾದರೂ ಅಕಾಡೆಮಿ ಹುದ್ದೆಯನ್ನು ಅಲಂಕರಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.